ಕುಂದಾಪುರ, ಮೇ 26: ತಾಲೂಕಿನ ಕೋಟೇಶ್ವರ ಸಮೀಪದ ಪುರಾಣಿಕ್ ರಸ್ತೆಯ ಮೊಳಹಳ್ಳಿಯಿಂದ ವರದಿಯಾಗಿರುವ ಆಘಾತಕಾರಿ ಘಟನೆಯಲ್ಲಿ ಪಟ್ಟಣದ ಚಿನ್ಮಯಿ ಆಸ್ಪತ್ರೆಯ ಮಾಲಕ ಕಟ್ಟೆ ಭೋಜಣ್ಣ(80) ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಕೋಟ್ಯಾಧೀಶರಾಗಿರುವ ಭೋಜಣ್ಣ ಅವರು ಬೆಂಗಳೂರಿನ ಹಲವಾರು ಹೋಟೆಲ್‌ಗಳ ಮಾಲೀಕರಾಗಿದ್ದು, ಕುಂದಾಪುರದ ಚಿನ್ಮಯಿ ಆಸ್ಪತ್ರೆಯನ್ನು ಹೊಂದಿದ್ದಾರೆ. ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಸ್ನೇಹಿತ ಗಣೇಶ್ ಶೆಟ್ಟಿ ಅವರ ಮನೆಯ ಸಿಟ್‌ಔಟ್‌ನಲ್ಲಿ ಅವರು ಜೀವ ಕೊನೆಗೊಳಿಸಿದ್ದಾರೆ.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೋಜಣ್ಣ ಬಹಳ ಹೆಸರುವಾಸಿ. ಪ್ರಾಥಮಿಕ ವರದಿಗಳ ಪ್ರಕಾರ, ಆರ್ಥಿಕ ಸಂಕಷ್ಟ ಮತ್ತು ಭೂ ವ್ಯವಹಾರವೇ ಈ ತೀವ್ರ ಹೆಜ್ಜೆಗೆ ಕಾರಣ.
ಕುಂದಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.