ಕೆಎಸ್ಎಲ್ ಯು ಕಾನೂನು ಪರೀಕ್ಷೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ನವೆಂಬರ್ 15 ರಂದು ನಡೆಯಬೇಕಾಗಿದ್ದ ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಕಿಣಗಿ ನೇತೃತ್ವದ ಹೈಕೋರ್ಟ್ ನ ಏಕಸದಸ್ಯ ಪೀಠವು ಸೋಮವಾರದಿಂದ (ನವೆಂಬರ್ 15ರಿಂದ) ಆರಂಭವಾಗ ಬೇಕಿದ್ದ ಕಾನೂನು ವಿವಿಯ ಸೆಮಿಸ್ಟರ್ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ ಆದೇಶ ಹೊರಡಿಸಿದೆ.

ಕರ್ನಾಟಕ ಕಾನೂನು ವಿವಿ ಪದೇ ಪದೇ ತನ್ನ ಅಧಿಸೂಚನೆಗಳನ್ನು ಹೊರಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡಿತ್ತು, ಅಷ್ಟೇ ಅಲ್ಲದೆ ಈ ಹಿಂದೆ ತನ್ನ ಅಕಾಡಿಮಿಕ್ ಕ್ಯಾಲೆಂಡರ್ ಪ್ರಕಾರ ನಡೆದುಕೊಳ್ಳದೆ ವಿಳಂಬ ನೀತಿಯನ್ನು ಅನುಸರಿಸಿತ್ತು, ಈಗ ವಿದ್ಯಾರ್ಥಿಗಳು ಕಾನೂನು ವಿವಿಯ ನಡೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಮೂಲಕ ತಡೆಯಾಜ್ಞೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Latest Indian news

Popular Stories