ಕೆರೆಯಲ್ಲಿ ಮುಳಗುತ್ತಿದ್ದ ಸಹೋದರನನ್ನು ಬದುಕಿಸಲು ಹೋಗಿ ಮೂವರು ಸಹೋದರಿಯರು ಮೃತ್ಯು

ಬೆಂಗಳೂರು, ನ.2 : ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಕೊಳದಲ್ಲಿ ಮುಳುಗುತ್ತಿದ್ದ ತಮ್ಮ ಸಹೋದರನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಮೂವರು ಹುಡುಗಿಯರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಆದರೆ ಸಹೋದರ ಕೂಡ ಜಲಸಮಾಧಿಯಾಗಿದ್ದಾನೆ.

IMG 20221102 215253 Featured Story, bellary

ಚನ್ನಹಳ್ಳಿ ತಾಂಡಾದ ತಮ್ಮ ನಿವಾಸದ ಸಮೀಪದ ಕೆರೆಯಲ್ಲಿ ಸಹೋದರ ಮುಳುಗುತ್ತಿರುವುದನ್ನು ಕಂಡ ಬಾಲಕಿಯರು ಆತನನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ಈ ವೇಳೆ ಮೂವರು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಅಭಿ (13), ಅಶ್ವಿನಿ (14), ಕಾವೇರಿ (18) ಮತ್ತು ಅಪೂರ್ವ (18) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಅಪೂರ್ವ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Latest Indian news

Popular Stories