ಪಾಟ್ನಾ: ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಅಪಘಾತವಾಗಿ, ಎಸ್ಕಾರ್ಟ್ ನಲ್ಲಿದ್ದ ಸಿಬ್ಬಂದಿಗೆ ಗಾಯವಾದ ಘಟನೆ ಬಿಹಾರದ ಡುಮರಾಯನ ಮತಿಲಾ-ನಾರಾಯಣಪುರ ರಸ್ತೆಯಲ್ಲಿ ರವಿವಾರ ತಡರಾತ್ರಿ (ಜ.15 ರಂದು) ರಾತ್ರಿ ನಡೆದಿದೆ.
ಕೇಂದ್ರ ಸಚಿವ ಅಶ್ವಿನಿ ಚೌಬೆ ಬಕ್ಸಾರ್ ನಿಂದ ಪಾಟ್ನಾಕ್ಕೆ ವಾಪಾಸ್ ಆಗುತ್ತಿದ್ದ ವೇಳೆ ಮತಿಲಾ-ನಾರಾಯಣಪುರ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಪಲ್ಟಿಯಾಗಿ ಹಳ್ಳಕೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಪೊಲೀಸರು ಹಾಗೂ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಚಿವ ಅಶ್ವಿನಿ ವಿಡಿಯೋ ಮೂಲಕ ಘಟನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.