ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಪರವೂರ್‌ನಲ್ಲಿನ ಹೋಟೆಲೊಂದರಲ್ಲಿ ಆಹಾರ ಸೇವಿಸಿದ 68 ಮಂದಿ ಭೇದಿ ಮತ್ತು ವಾಂತಿಯಿಂದ ಬಳಲಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಇದೀಗ ಅವರೆಲ್ಲರೂ ಚಿಕತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಆದ್ರೆ, ಅವರಲ್ಲಿ ಚೆರೈ ಮೂಲದ ಗೀತು ಎಂದು ಗುರುತಿಸಲಾದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಎರ್ನಾಕುಲಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. 68 ಮಂದಿಯಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.
ಸೋಮವಾರ ಸಂಜೆ ಈ ಹೊಟೇಲ್‌ನಿಂದ ಕುಜಿಮಂತಿ, ಅಲ್ಫಾಹಂ, ಶವಾಯಿ ಸೇವಿಸಿದ ಜನರು ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಸುದ್ದಿ ತಿಳಿದ ತಕ್ಷಣವೇ ಪಾಲಿಕೆ ಆರೋಗ್ಯಾಧಿಕಾರಿಗಳು ಹೋಟೆಲ್ ಮಜ್ಲಿಸ್ ಅನ್ನು ಮುಚ್ಚಿಸಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿಗಳ ಪ್ರಕಾರ, ಮಾಂಸಾಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.