ಚಿಕ್ಕಮಗಳೂರು: ‘ಅವರು ಮನೆ ಹಾಳರು.. ರೆಕಾರ್ಡ್ ಮಾಡಿಕೊಳ್ಳ ಬೇಡಿ.. ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ.
ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು, ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದರು, ನಾನು ಬೈಯುತ್ತೇನೆ, ಜನರನ್ನು ಕರೆದುಕೊಂಡು ಹೋಗುವವರು ಮನೆಹಾಳರು..” ಎಂದು ಹಿಂದೂಪರ ಸಂಘಟನೆಗಳನ್ನು, ಬಿಜೆಪಿಯನ್ನು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ತರಾಟೆಗೆ ತೆಗೆದುಕೊಂಡ ಆಡಿಯೋವೊಂದು ವೈರಲ್ ಆಗಿದೆ.
ಕೇಸರಿ ಶಾಲು, ಕುಂಕುಮ ಹಾಕಿಕೊಂಡು ದತ್ತಮಾಲೆ ಹಾಕಿದರೆ ಹೊಟ್ಟೆ ತುಂಬುವುದಿಲ್ಲ. ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ ಎಂದು ಪರೋಕ್ಷವಾಗಿ ಹಿಂದೂ ಪರ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.