ಕೈ ನಾಯಕಿಯರ ಮಾತಿನ ಚಕಮಕಿ

ವಿಜಯಪುರ: ನಾಯಕರ ಪಕ್ಕದಲ್ಲಿ ನಿಲ್ಲುವ ಸಲುವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಹಾಗೂ ಮಹಾನಗರ ಪಾಲಿಕೆ ನೂತನ ಸದಸ್ಯೆ ಆರತಿ ಶಹಾಪುರ ಮಧ್ಯೆ ಮಾತಿನ ಚಕಮಕಿ ಆಗಿದೆ.

ವಿಜಯಪುರ ನಗರದ ಟೇಕಡೆ ಗಲ್ಲಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ 200 ಯುನಿಟ್ ವಿದ್ಯುತ್ ಹಾಗೂ ಮಹಿಳೆಯರಿಗೆ 2 ಸಾವಿರ ನಗದು ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಪ್ರಚಾರ ಕರ್ಯಕ್ರಮದಲ್ಲಿ ಈ ಇಬ್ಬರ ಮಧ್ಯೆ ಮಾತಿನ ಚಕಮಕಿ ಆಗಿದೆ.

ಅಲ್ಲದೇ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್ ಗಲಾಟೆಯನ್ನು ತಿಳಿಗೊಳಿಸಿದರು.

ಇನ್ನೂ ಇತ್ತೀಚೆಗೆ ಸಿಂದಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆಯಲ್ಲಿ ಕೈ ಮುಖಂಡರೊಬ್ಬರ ಮನೆಯಲ್ಲೂ ಈ ಇಬ್ಬರು ನಾಯಕಿಯರು ಮಾತಿನ ಚಕಮಕಿ ನಡೆದಿತ್ತು ಎಂದು ಕಾಂಗ್ರೆಸ್ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನೂ ಈ ಗಲಾಟೆ ಮುಂದುವರೆಯುತ್ತಾ ಅಥವಾ ಇಲ್ಲಿಗೆ ಅಂತ್ಯವಾಗುತ್ತಾ ಎಂದು ಕಾಯ್ದು ನೋಡಬೇಕಿದೆ.

Latest Indian news

Popular Stories