ಕೊಡಗು | ಕಾಡಾನೆ ದಾಳಿ-ಆರ್.ಆರ್ ಟಿ ಸಿಬ್ಬಂದಿ ಮೃತ್ಯು

ಆನೆ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಕಾಡಾನೆ ದಾಳಿ ಮಾಡಿ ಆನೆ ಕಾರ್ಯಪಡೆ ಸಿಬ್ಬಂದಿ ಗಿರೀಶ್(35) ಮೃತಪಟ್ಟಿದ್ದಾರೆ.

ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಮಡಿಕೇರಿ ಬಳಿಯ ಕೆದಕಲ್ ಬಳಿ ಘಟನೆ ನಡೆದಿದೆ.
ಕಾಡಾನೆ ಕಾಡಿಗಟ್ಟುವ ಸಂದರ್ಭ ದಲ್ಲಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡಿದ್ದರು. ಗಿರೀಶ್
ಕಳೆದ ಹಲವು ವರ್ಷಗಳಿಂದ ಆನೆಕಾಡು ಆರ್ ಆರ್ ಟಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Latest Indian news

Popular Stories