ಗಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು ನೋಂದಾಯಿಸಿಕೊಳ್ಳಲು ಗ್ರಾಮ ಒನ್ ಕೇಂದ್ರಗಳಿಗೆ ಬೇಟಿ ನೀಡಿದಾಗ ಪ್ರತಿಯೊಬ್ಬರಿಂದ 100 ರೂಪಾಯಿಯನ್ನು ಕಾನೂನು ಬಹಿರವಾಗಿ ಪಡೆಯುತ್ತಿರುವ ಬಗೆ ಅಲ್ಲಲ್ಲಿ ಕೇಳಿ ಬರುತ್ತಿದೆ.
ವಿರಾಜಪೇಟೆ ಗೋಣಿಕೊಪ್ಪ ಪೂನಂ ಪೇಟೆ ಗ್ರಾಮವನ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಡಿಕೊಡಬೇಕಾದ ಸೌಲಭ್ಯವನ್ನು 100 ರೂಪಾಯಿ ಪಡೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡ ಪರಿಣಾಮ ಈ ಬಗ್ಗೆ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿದಾಗ ಹಲವು ಸಾರ್ವಜನಿಕರು ಇದನ್ನು ದೃಢೀಕರಿಸಿದ್ದಾರೆ. ಗ್ರಾಮ ಒನ್ ಕೇಂದ್ರದ ನಿರ್ವಾಹಕರನ್ನು ಈ ಬಗ್ಗೆ ಪ್ರಶ್ನಿಸಿದಾಗ ರೂ 20 ಸ್ವೀಕರಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ಸರ್ಕಾರದ ನಿಯಮದಂತೆ ಉಚಿತವಾಗಿ ಸೌಲಭ್ಯವನ್ನು ಕಲ್ಪಿಸಬೇಕಾಗಿದ್ದು. ಸರ್ಕಾರ ಇದಕ್ಕಾಗಿ ನೇರವಾಗಿ ಗ್ರಾಮ ಒನ್ ಕೇಂದ್ರದ ನಿರ್ವಾಹಕರಿಗೆ ಹಣವನ್ನು ಪಾವತಿಸುತ್ತಾರೆ. ಆದರೆ ಸಾರ್ವಜನಿಕರಿಗೆ ಇದೀಗ ಜಿಲ್ಲೆಯ ವಿವಿಧಡೆ ಗ್ರಾಮ ಒನ್ ಕೇಂದ್ರಗಳ ಮೂಲಕ ವಂಚನೆ ನಡೆಯುತ್ತಿದೆ. ಹಾಗೆ ವಿರಾಜಪೇಟೆಯಲ್ಲಿ ಇದುವರೆಗೂ ಕೂಡ ಜಿಲ್ಲಾಡಳಿತ ಕರ್ನಾಟಕ ಒನ್ ಕೇಂದ್ರವನ್ನು ಸ್ಥಾಪಿಸಿಲ್ಲ ಬೇರೆ ಗ್ರಾಮ ಪಂಚಾಯಿತಿಯ ಮೂಲಕ ಕೆಲವು ಸೈಬರ್ ಸೆಂಟರ್ ಗಳು ಅನಧಿಕೃತವಾಗಿ ಗ್ರಾಮ ಒನ್ ಕೇಂದ್ರದ ಕೋಡಿನ ಮೂಲಕ ಗೃಹಲಕ್ಷ್ಮಿ ಯೋಜನೆಯ ಅಜ್ಜಿಗಳನ್ನು ಸ್ವೀಕರಿಸಿ ರೂ 80 ರಿಂದ ರೂ.100 ಅನ್ನು ಜನರಿಂದ ಪಡೆಯುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ.
ಇಂದು ಶನಿವಾರ ಸರ್ಕಾರಿ ರಜೆ ಇರುವುದರಿಂದ ಜಿಲ್ಲೆಯಲ್ಲಿ ಬಹುತೇಕ ಅಧಿಕಾರಿಗಳು ತಮ್ಮ ಊರಿಗೆ ತೆರಳಿದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳುವರು ಯಾರು ಎಂಬುದೇ ಪ್ರಶ್ನೆಯಾಗಿದೆ. ಕಳೆದ ಬಾರಿ ಗ್ರಹ ಜ್ಯೋತಿ ಆರಂಭವಾದ ಸಂದರ್ಭದಲ್ಲಿ ಕೂಡ ಇದೇ ರೀತಿಯ ವಂಚನೆಗಳು ನಡೆದ ಬಗ್ಗೆ ವರದಿಯಾಗಿ ನಂತರ ಅಧಿಕಾರಿಗಳು ಅದನ್ನು ಸಮರ್ಪಕಗೊಳಿಸಿದ್ದರು. ಇದೀಗ ಸರಕಾರದ ಯೋಜನೆ ಗ್ರಹ ಜ್ಯೋತಿಯಲ್ಲೂ ಕೂಡ ಕೆಲವರು ದಂದೆ ಆರಂಭಿಸಿದ್ದಾರೆ. ಜಿಲ್ಲಾಡಳಿತ ಕೂಡಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊನ್ನಂಪೇಟೆಯ ಗ್ರಾಮ ಒನ್ ಕೇಂದ್ರದಲ್ಲಿ ‘ಗೃಹಲಕ್ಷ್ಮಿ’ ಯೋಜನೆ ನೋಂದಣಿ ಸಂದರ್ಭದಲ್ಲಿ ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ಪಡೆಯುತ್ತಿದ್ದ ಹಿನ್ನೆಲೆ ಪೊನ್ನಂಪೇಟೆ ಗ್ರಾಮ ಒನ್ ಕೇಂದ್ರದ ಪರವಾನಗಿದಾರರನ್ನು ಅಮಾನತು ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.