ಕೊನೆಗೂ ಆರ್ಯನ್ ಖಾನ್’ಗೆ ಜಾಮೀನು ಮಂಜೂರು

ಮುಂಬೈ: ಡ್ರಗ್ ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್’ಗೆ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮೂರು ವಾರಗಳ ಬಂಧನದ ನಂತರ ಇದೀಗ ಆರ್ಯನ್ ಖಾನ್ ಮನೆಯ ಹಾದಿ ನೋಡುವಂತಾಗಿದೆ. ಕ್ರೂಸ್ ಶಿಪ್ ಪಾರ್ಟಿಗೆ ಸಂಬಂಧಿಸಿದಂತೆ ಅಕ್ಟೋಬರ್ ಮೂರರದಂದು ಆರ್ಯನ್ ಖಾನ್ ರನ್ನು ಎನ್.ಸಿ.ಬಿ ವಶಕ್ಕೆ ಪಡೆದಿತ್ತು.

ಈ ಮುಂಚೆ ಎರಡು ಬಾರಿ ಅವರ ಜಾಮೀನು ಅರ್ಜಿ ತಿರಸ್ಕರಿಸಲ್ಪಟ್ಟಿತ್ತು. ಇದೀಗ ಈ ಪ್ರಕರಣದಲ್ಲಿ ರಾಜಕೀಯ ಮೇಲಾಟಗಳು ನಡೆಯುತ್ತಿದ್ದು ಎನ್.ಸಿ.ಬಿ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ಆರೋಪ ಕೂಡ ಕೇಳಿ ಬಂದಿದೆ.

Latest Indian news

Popular Stories

error: Content is protected !!