ಕೊನೆಯ ಕ್ಷಣದಲ್ಲಿ ಬ್ರೇಸ್ ವೆಲ್ ವಿಕೆಟ್ ಪಡೆಯಲು ಸಹಾಯವಾಗಿದ್ದು ವಿರಾಟ್ ಸಲಹೆ: ಶಾರ್ದೂಲ್

ಹೈದರಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿದೆ. ರನ್ ಮೇಲಾಟದಲ್ಲಿ ರೋಹಿತ್ ಶರ್ಮಾ ಬಳಗವು 12 ರನ್ ಅಂತರದ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಶುಭ್ಮನ್ ಗಿಲ್ ದ್ವಿಶತಕದ ನೆರವಿನಿಂದ 349 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಕಿವೀಸ್ 337 ರನ್ ಗಳಿಸಿತು. ಕೇವಲ 78 ಎಸೆತಗಳಲ್ಲಿ 140 ರನ್ ಹೊಡೆದ ಬ್ರೇಸ್ ವೆಲ್ ಕಿವೀಸ್ ಗೆ ಒಮ್ಮೆ ಗೆಲುವಿನ ಆಸೆ ಮೂಡಿಸಿದ್ದರು.

ಕೊನೆಯ ಐದು ಎಸೆತಗಳಲ್ಲಿ ಕಿವೀಸ್ ಗೆ 13 ರನ್ ಅಗತ್ಯವಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆತಕ್ಕೆ ಬ್ರೇಸ್ ವೆಲ್ ಔಟಾದರು. ಇದರೊಂದಿಗೆ ಭಾರತ ಗೆಲುವು ಸಾಧಿಸಿತು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸಲಹೆಯು ಅಂತಿಮ ವಿಕೆಟ್ ಪಡೆಯಲು ಹೇಗೆ ಸಹಾಯ ಮಾಡಿತು ಎಂಬುದನ್ನು ಠಾಕೂರ್ ಪಂದ್ಯದ ಬಳಿಕ ಬಹಿರಂಗಪಡಿಸಿದರು.

ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಠಾಕೂರ್ ಅವರು “ವಿರಾಟ್ ಭಾಯ್ ನನ್ನನ್ನು ಬ್ಯಾಟ್ಸ್‌ಮನ್ ಔಟ್ ಮಾಡಲು ಯಾರ್ಕರ್ ಲೆಂತ್ ಬೌಲ್ ಮಾಡಲು ಕೇಳಿದರು” ಎಂದು ಹೇಳಿದರು. ಬ್ರೇಸ್ ವೆಲ್ ಅವರು ಎಲ್ ಬಿಡಬ್ಲ್ಯೂ ರೀತಿಯಲ್ಲಿ ಔಟಾಗಿದ್ದರು.

ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ.

Latest Indian news

Popular Stories