ಕೊಲ್ಲೂರು: ಜಡ್ಕಲ್ ಬಳಿ ಬಸ್ ಅಪಘಾತ – ಒರ್ವ ಮೃತ್ಯು, ಐವರಿಗೆ ಗಾಯ

ಕೊಲ್ಲೂರು:- ಚಿತ್ರದುರ್ಗದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ವೊಂದು ಮಾ.29 ರಂದು ಜಡ್ಕಲ್‌ ಗ್ರಾಮದ ಹಾಲ್ಕಲ್‌ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದು, ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರೋರ್ವರು ಮೃತಪಟ್ಟು ಇತರ 5 ಮಂದಿ ಗಂಭೀರ ಗಾ‌ಯಗೊಂಡು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಸವರಾಜ ಶಿರಟ್ಟಿ ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಆತ ಬರುವ ದಾರಿಯಲ್ಲೇ  ಮೃತಪಟ್ಟಿರುವುದಾಗಿ ದೃಢೀಕರಿಸಿರುತ್ತಾರೆ. ಗಾಯಾಳು ಚಿತ್ರದುರ್ಗ ತಾಲೂಕಿನ ನಿವಾಸಿ ರಂಗಪ್ಪ(52) ಹಾಗೂ ಅವರ ಪುತ್ರ ಗಿರೀಶ, ದೇವೆಂದ್ರಪ್ಪ, ಮಲ್ಲೇಶ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಹಾಲಸ್ವಾಮಿ ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಕೊಲ್ಲೂರು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Latest Indian news

Popular Stories