ಕೋಟ: ಮಳೆ ನೀರು ಚರಂಡಿಗೆ ಜಾರಿ ಬಿದ್ದು ವ್ಯಕ್ತಿ ಮೃತ್ಯು

ಕುಂದಾಪುರ, ಜು.25: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಾಡಿ-ವರ್ಕಾಡಿ ಎಂಬಲ್ಲಿ ಸೋಮವಾರ ರಸ್ತೆ ಬದಿಯ ಮಳೆನೀರು ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಸ್ಥಳೀಯ ನಿವಾಸಿ ಗೋಕುಲದಾಸ್ ಪ್ರಭು (54) ಎಂದು ಗುರುತಿಸಲಾಗಿದೆ.

ಪ್ರಭು ಅವರು ಹರ್ಕಾಡಿ ಸಮೀಪದ ಮಕ್ಕಿಮನೆಗೆ ದಿನಸಿ ದಿನಸಿ ಖರೀದಿಸಲು ಹೋಗಿದ್ದರು. ಈ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿದಿದೆ. ಎಷ್ಟೋ ಹೊತ್ತಾದರೂ ವಾಪಸ್ ಬರದ ಕಾರಣ ಮಗ ಹುಡುಕಿಕೊಂಡು ಹೋದ. ಮಳೆನೀರಿನ ಚರಂಡಿಯಲ್ಲಿ ಪ್ರಭು ಬಿದ್ದಿರುವುದನ್ನು ಗಮನಿಸಿದ್ದಾರೆ. ಅಕ್ಕಪಕ್ಕದವರ ನೆರವಿನಿಂದ ಪ್ರಭು ಅವರನ್ನು ಎತ್ತಿದರೂ ಕೊನೆಯುಸಿರೆಳೆದಿದ್ದರು.

ಅಂಗಡಿಗೆ ಹೋಗುವಾಗ ಕಾಲು ಜಾರಿ ಮಳೆ ನೀರು ಚರಂಡಿಗೆ ಬಿದ್ದಿರಬೇಕು ಎನ್ನಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಭೇಟಿ ನೀಡಿದ್ದಾರೆ. ಈ ಸಂಬಂಧ ಕೋಟ ಠಾಣಾಧಿಕಾರಿ ಶಂಬುಲಿಂಗಯ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Indian news

Popular Stories