ಪತ್ರಿಕಾ ಪ್ರಕಟಣೆ:
ಕೋಟದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನದಲ್ಲಿ ಓರ್ವ ಕಲಾವಿದ ಕ್ಷೌರಿಕ ವೃತ್ತಿ ಹಾಗೂ ಜಾತಿಯನ್ನು ಹೀನಾಯವಾಗಿ ಅಪಹಾಸ್ಯ ಮಾಡಿದ್ದನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ಉಗ್ರವಾಗಿ ಖಂಡಿಸುತ್ತದೆ.
ಇತ್ತೀಚೆಗೆ ಕುಲಕಸುಬಾದ ಕ್ಷೌರಿಕ ವೃತ್ತಿ ವಿಮಖವಾಗುವ ಸಂದರ್ಭದಲ್ಲಿ ಈ ನಮ್ಮ ವೃತ್ತಿಪರ ಸಂಘಟಣೆಯಾದ ಸವಿತ ಸಮಾಜ ಮುಖಾಂತರ ಈ ವೃತ್ತಿಗೆ ಒಂದು ಬೆಲೆ ಗೌರವ ಸಿಗುವ ಸಂದರ್ಭದಲ್ಲಿ ಇಂತಹ ಪ್ರಸಿದ್ಧ ಭಕ್ತಿಪ್ರಧಾನ ಕ್ಷೇತ್ರದ ಹೆಸರಲ್ಲಿ ನಡೆಸುವ ಮೇಳದಲ್ಲಿ ಈ ರೀತಿ ಕಲಾವಿದನಿಂದ ಅಪಹಾಸ್ಯ ಮಾಡಿ ವೃತ್ತಿಗೆ, ಕುಲಕ್ಕೆ ವಿಶೇಷವಾಗಿ ಈ ಯಕ್ಷಗಾನದ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದು ಮುಜುಗರ ಮಾಡುವ ಈ ಕಲಾವಿದನನ್ನು ಮೇಳದಿಂದ ಉಚ್ಚಾಟಿಸಬೇಕೆಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ ನಿಂಜೂರು ಹಾಗೂ ಪ್ರ.ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಮೇಳದ ವ್ಯವಸ್ಥಾಪಕರನ್ನು ಆಗ್ರಹಿಸಿ ತೀವ್ರ ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದಾರೆ.