ಕೋವಿಡ್‌ ಹೆಚ್ಚಳ: ಚೀನಾದಲ್ಲಿ ಮತ್ತೆ ಲಾಕ್‌ಡೌನ್‌

ಬೀಜಿಂಗ್‌: ಕೊರೊನಾ ಮೊದಲು ಕಾಣಿಸಿಕೊಂಡ ರಾಷ್ಟ್ರವಾದ ಚೀನಾದಲ್ಲಿ ಇದೀಗ ಮತ್ತೂಮ್ಮೆ ಕೆಲ ಪ್ರದೇಶಗಳಲ್ಲಿ ಸೋಂಕು ಏರಿಕೆಯಾಗಿದೆ.

ಅದೇ ಹಿನ್ನೆಲೆ ಸಿಚುವಾನ್‌ ಪ್ರಾಂತ್ಯದ ರಾಜಧಾನಿಯಾಗಿರುವ ಚೆಂಗ್ಡು ನಗರದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ.

ನಗರದಲ್ಲಿ ಒಟ್ಟು 2.1 ಕೋಟಿ ಜನರಿದ್ದು, ಎಲ್ಲರಿಗೂ ಮನೆಯೊಳಗೇ ಇರಬೇಕು. ಅಗತ್ಯ ಕೆಲಸಕ್ಕೆ ಮನೆಯಿಂದ ಒಬ್ಬರು ಹೊರಗೆ ಬರಬಹುದು. ಅವರಿಗೂ 24 ಗಂಟೆಗಳೊಳಗಿನ ಕೊರೊನಾ ನಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ.

ನಗರಕ್ಕೆ ಬಂದಿಳಿಯುತ್ತಿದ್ದ ಹಾಗೂ ನಗರದಿಂದ ಹೊರಗೆ ತೆರಳುತ್ತಿದ್ದ ಶೇ.70 ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಚೆಂಗ್ಡು ನಗರದಲ್ಲಿ ಸದ್ಯ 1 ಸಾವಿರದಷ್ಟು ಕೊರೊನಾ ಪ್ರಕರಣಗಳಿವೆ. ಸೋಂಕಿಗೆ ಯಾವುದೇ ಸಾವು ಸಂಭವಿಸಿರುವುದು ವರದಿಯಾಗಿಲ್ಲ.

Latest Indian news

Popular Stories

Social Media Auto Publish Powered By : XYZScripts.com
error: Content is protected !!