ಖಲೀಫರ ಮೇಲೆ ದೂರು ದಾಖಲಿಸಿದ ದ್ವೇಷ ಭಾಷಣಕಾರ ಜಿತೇಂದ್ರ ತ್ಯಾಗಿ

ಡೆಹ್ರಾಡೂನ್: ಉತ್ತರ ಪ್ರದೇಶ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಅಕಾ ಜಿತೇಂದ್ರ ತ್ಯಾಗಿ ಮಂಗಳವಾರ ಪ್ರವಾದಿ ಮೊಹಮ್ಮದ್ (PBUH) ಮತ್ತು ಮೂವರು ಖಲೀಫರಾದ ಅಬು ಬಕರ್, ಉಮರ್ ಮತ್ತು ಉಸ್ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಇಸ್ಲಾಂನಲ್ಲಿ ನಂಬಿಕೆಯಿಲ್ಲದ ವ್ಯಕ್ತಿಗಳ ವಿರುದ್ಧದ ಹಿಂಸಾಚಾರಕ್ಕೆ ಅವರು ಹೊಣೆಗಾರರಾಗಿದ್ದರು ಎಂದು‌ ದೂರಿದ್ದಾರೆ.

ಇತ್ತೀಚಿನ ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಯಾಗಿರುವ ತ್ಯಾಗಿ ಅವರು ಹರಿದ್ವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ದೂರನ್ನು ಸ್ವೀಕರಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇನ್ನು ಧರ್ಮ ಸಂಸದ್ ಆಯೋಜಿಸಿದ್ದ ಯತಿ ನರಸಿಂಹಾನಂದ ಗಿರಿ ಹಾಗೂ ಇತರರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ತಮ್ಮ ದೂರಿನಲ್ಲಿ, ಯಾವುದೇ ಆಧಾರವಿಲ್ಲದೆ ಕುರಾನ್ ಅನ್ನು ಅಲ್ಲಾಹನ (SWT) ಪುಸ್ತಕವೆಂದು ಪ್ರಚಾರ ಮಾಡಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

Latest Indian news

Popular Stories

error: Content is protected !!