ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿಯ ಬಂಧನ – 5 ಕೆ.ಜಿ ವಶ

ಮುಂದುವರಿಯುತ್ತಿರುವ ಗಾಂಜಾ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದು ಐದು ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಹಾಗು ಮಡಿಕೇರಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗು ವಿರಾಜೇಪೇಟೆ ಪೋಲೀಸರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಾದಿಕ್ ಪಾಷಾ 33 ವರ್ಷ, ಖಲೀಲ್, 37 ವರ್ಷ, ಇಲಿಯಾಸ್ ಅಹಮ್ಮದ್, 44 ವರ್ಷ ಹಾಗೂ ಹಾಕತೂರು ನಿವಾಸಿಯಾದ ದರ್ಶನ್ 27 ವರ್ಷ,ಹಾಕತ್ತೂರು ಗ್ರಾಮದ ನಿವಾಸಿ ಕರಣ್ ಕುಮಾರ್, 27 ವರ್ಷ, ಮೂರ್ನಡು ನಿವಾಸಿ ಗಗನ್ 26 ವರ್ಷ, Assalamualaikum
ನಿವಾಸಿ ನಿರೂಪ್.ಎಸ್, 27 ವರ್ಷ ಹಾಗೂ ವಿನಯ್ ಬಂಧಿತ ಆರೋಪಿಗಳು.

Latest Indian news

Popular Stories