ನವದೆಹಲಿ: ದೇಶದ ಅಪರಾಧಿಕ ಕಾನೂನುಗಳಲ್ಲಿ ಗಣನೀಯ ಬದಲಾವಣೆ ಘೋಷಿಸಿದ್ದು ಇನ್ನು ಮೇಲೆ ಗುಂಪು ಹತ್ಯೆಗೆ ಮರಣ ದಂಡನೆ ಶಿಕ್ಷೆಯನ್ನು ತಿದ್ದುಪಡಿ ಮಸೂದೆಯಲ್ಲಿ ಮಂಡನೆಯಾಗಿದೆ.
1860 ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯೆಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ನು ಬದಲಲಾಯಿಸಲಾಗಿದೆ ಮತ್ತು ಭಾರತೀಯ ಎವಿಡೆನ್ಸ್ ಆ್ಯಕ್ಟನ್ನು ಭಾರತೀಯ ಸಾಕ್ಷಿ ಕಾಯಿದೆಯನ್ನು ಎಂದು ಬಲಾಯಿಸಲಾಗಿದೆ. ಮೂರು ಮಸೂದೆಯನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಲಾಗಿದೆ.
ಪ್ರತ್ಯೇಕತೆ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಅಥವಾ ಸಾರ್ವಭೌಮತ್ವ ಅಥವಾ ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕಾರ್ಯಗಳ ಮೇಲೆ ಹೊಸ ಅಪರಾಧವನ್ನು ಪರಿಷ್ಕೃತ ಕಾನೂನುಗಳಡಿಯಲ್ಲಿ ಬರುವಂತೆ ಮಾಡಲಾಗಿದ್ದು ದೇಶದ್ರೋಹ ಕಾನೂನನ್ನು “ಹಿಂಪಡೆಯಲಾಗಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಉದ್ದೇಶಿತ ಕಾನೂನಿನಲ್ಲಿ “ದೇಶದ್ರೋಹ” ಎಂಬ ಪದವಿಲ್ಲ. ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕಾರ್ಯಗಳಿಗಾಗಿ ಇದನ್ನು ಸೆಕ್ಷನ್ 150 ಯ ಅಡಿಯಲ್ಲಿ ತರಲಾಗಿದೆ.
ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆಯನ್ನು ಕೇಂದ್ರವು ಪರಿಚಯಿಸಲಿದೆ ಎಂದು ಅಮಿತ್ ಶಾ ಹೇಳಿದರು. ಇತರ ಪ್ರಸ್ತಾವಿತ ಶಿಕ್ಷೆಗಳಲ್ಲಿ ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಮತ್ತು ಅಪ್ರಾಪ್ತ ವಯಸ್ಸಿನ ಅತ್ಯಾಚಾರಕ್ಕಾಗಿ ಮರಣದಂಡನೆ ಸೇರಿವೆ.
“ಶಿಕ್ಷಿಸುವುದೇ ಮಸೂದೆಯ ಗುರಿಯಾಗಿರುವುದಿಲ್ಲ, ನ್ಯಾಯವನ್ನು ಒದಗಿಸುವುದು ಮುಖ್ಯ. ಅಪರಾಧವನ್ನು ನಿಲ್ಲಿಸುವ ಭಾವನೆಯನ್ನು ಸೃಷ್ಟಿಸಲು ಶಿಕ್ಷೆಯನ್ನು ನೀಡಲಾಗುವುದು” ಎಂದು ಅವರು ಹೇಳಿದರು.
ಹೊಸ ಮಸೂದೆಗಳಲ್ಲಿ ಮರಣದಂಡನೆಯನ್ನು ಉಳಿಸಿಕೊಳ್ಳಲಾಗಿದೆ.