ಗುಜುರಿ ಗೋದಾಮಿಗೆ ಬೆಂಕಿ: ನಾಲ್ವರು ಕಾರ್ಮಿಕರು ಸಜೀವ ದಹನ, 17 ಮಂದಿಯ ರಕ್ಷಣೆ

ಯಮುನಾನಗರ: ಗುಜರಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಯಮುನಾನಗರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಯಮುನಾ ನಗರದಲ್ಲಿ ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದ್ದ ಈ ಗೋದಾಮಿನಲ್ಲಿ ಕಳೆದ ರಾತ್ರಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಆ ವೇಳೆ ಕೆಲಸ ಮಾಡುತ್ತಿದ್ದ ಕುಟುಂಬಗಳ ಮನೆಗಳಿಗೂ ಬೆಂಕಿ ಆವರಿಸಿಕೊಂಡಿದೆ. ಈ ದುರ್ಘಟನೆಯಲ್ಲಿ ತಂದೆ ಮತ್ತು ಮೂವರು ಮಕ್ಕಳು ಸಜಿವ ದಹನವಾಗಿದ್ದಾರೆ. ಇನ್ನೂ ಕೆಲವರು ಗಂಭಿರಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಒಳಹೋಗಲು ಅಸಾಧ್ಯವಾದ ಕಾರಣ ಗೋದಾಮಿನ ಹಿಂದಿನ ಭಾಗದ ಗೋಡೆ ಒಡೆದು ಹಾಕಿ, ಒಳಗೆ ಸಿಲುಕಿದ್ದ 17 ಕಾರ್ಮಿಕರನ್ನು ರಕ್ಷಿಸಿದ್ದಾರೆ.

Latest Indian news

Popular Stories

error: Content is protected !!