ಗುರುಗ್ರಾಮ್ ಮಸೀದಿಗೆ ಬೆಂಕಿ, ಇಮಾಮ್ ಹತ್ಯೆ: ಹರಿಯಾಣದ ನುಹ್‌ನಲ್ಲಿ ಕರ್ಫ್ಯೂ ಜಾರಿ, ಬಿಗಿ ಭದ್ರತೆ

ಗುರುಗ್ರಾಮ್: ಗುರುಗ್ರಾಮ್‌ನ ಮಸೀದಿಯೊಂದರ ಮೇಲೆ ಗುಂಪೊಂದು ದಾಳಿ ಮಾಡಿ ಇಮಾಮ್‌ರನ್ನು ಹತ್ಯೆ ಮಾಡಿದ್ದು ಮಸೀದಿಗೆ ಬೆಂಕಿ ಹಚ್ಚಲಾಗಿದೆ.

ನುಹ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಮೆರವಣಿಗೆಯನ್ನು ತಡೆಯುವ ಪ್ರಯತ್ನದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಗುರುಗ್ರಾಮ್‌ನ ಸೆಕ್ಟರ್ 57 ಪ್ರದೇಶದಲ್ಲಿ 26 ವರ್ಷದ ಇಮಾಮ್ ನನ್ನು ಹತ್ಯೆ ಮಾಡಲಾಗಿದ್ದು ನೆರೆಯ ನುಹ್‌ನಿಂದ ಹಿಂಸಾಚಾರ ಹರಡುತ್ತಿದ್ದಂತೆ ಮಸೀದಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಧ್ಯರಾತ್ರಿಯ ನಂತರ ಗುಂಪೊಂದು ಸೆಕ್ಟರ್ 57ರ ಅಂಜುಮನ್ ಮಸೀದಿಗೆ ನುಗ್ಗಿ, ಗುಂಪಿನಲ್ಲಿದ್ದ ಕೆಲವರು ಮಸೀದಿಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಬೆಂಕಿ ಹಚ್ಚಿದ್ದಾರೆ.

ಏತನ್ಮಧ್ಯೆ, ಅಧಿಕಾರಿಗಳು ಮಂಗಳವಾರ ನುಹ್‌ನಲ್ಲಿ ಕರ್ಫ್ಯೂ ಜಾರಿ ಮಾಡಿದ್ದು ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕರು ಸಾವನ್ನಪ್ಪಿದ್ದಾರೆ. ಮೃತ ಗೃಹರಕ್ಷಕರನ್ನು ನೀರಜ್ ಮತ್ತು ಗುರುಸೇವಕ್ ಎಂದು ಗುರುತಿಸಲಾಗಿದೆ. ಅವರನ್ನು ಖೇದಾಲಿ ದೌಲಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು.

ನುಹ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ. ಅವರಲ್ಲಿ ಒಬ್ಬನನ್ನು ಬಿಹಾರ ಮೂಲದ ಸಾದ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ನುಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ತು ಪೊಲೀಸರು ಸೇರಿದಂತೆ 23 ಮಂದಿ ಗಾಯಗೊಂಡಿದ್ದಾರೆ. 

ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಜಿಲ್ಲೆಯಲ್ಲಿ 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು 27 ಜನರನ್ನು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 120 ವಾಹನಗಳಿಗೆ ಹಾನಿಯಾಗಿದೆ. ಈ ಪೈಕಿ ಪೊಲೀಸರಿಗೆ ಸೇರಿದ ಎಂಟು ಸೇರಿದಂತೆ 50 ಮಂದಿಗೆ ಬೆಂಕಿ ಹಚ್ಚಲಾಗಿದೆ. ನುಹ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.

Latest Indian news

Popular Stories