ಮಾಸ್ಕೋ: ಸ್ಥಳೀಯ ಕಾನೂನಿನಂತೆ ನಿಷೇಧಿತ ಅಂಶಗಳನ್ನು ತೆಗೆದು ಹಾಕುವಲ್ಲಿ ವಿಫಲಗೊಂಡ ಕಾರಣಕ್ಕಾಗಿ ಗೂಗಲ್ಗೆ 750 ಕೋಟಿ ರೂ. ಫೇಸ್ಬುಕ್ ಮಾತೃಸಂಸ್ಥೆ ಮೆಟಾಗೆ 175 ಕೋಟಿ ರೂ ಮಾಸ್ಕೋ ನ್ಯಾಯಾಲಯ ದಂಡ ವಿಧಿಸಿದೆ.
ಪದೇ ಪದೇ ಆದೇಶಿಸಿದರೂ ನಿರ್ಲಕ್ಷ್ಯ ವಹಿಸಿದ ಕಾರಣ 750 ಕೋಟಿ ರೂ.ಗಳ ಆಡಳಿತಾತ್ಮಕ ದಂಡವನ್ನು ಪಾವತಿಸುವಂತೆ ಟ್ಯಾಗನ್ಸ್ಕಿ ನ್ಯಾಯಾಲಯ ಆದೇಶಿಸಿದೆ. , ಮಾದಕ ದ್ರವ್ಯಗಳ ದುರುಪಯೋಗ, ಶಸ್ತ್ರಾಸ್ತ್ರಗಳು, ಸ್ಫೋಟಕ ಪದಾರ್ಥಗಳಿಗೆ ಸಂಬಂಧಿಸಿದ ಅಂಶಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳ ವಿರುದ್ದ ರಷ್ಯಾ ಅಧಿಕಾರಿಗಳ ಒತ್ತಡದ ಪರಿಣಾಮ ಇದಾಗಿದೆ.
ಜೈಲಿನಲ್ಲಿರುವ ಪ್ರತಿ ಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಾನೂನು ಬಾಹಿರವಾಗಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಅಂಶಗಳ ಪ್ರಕಟಿಸುವುದನ್ನು ಅಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದರು. ರಷ್ಯಾದಲ್ಲಿ ಗೂಗಲ್ ಚಟುವಟಿಕೆಗಳ ಮೇಲೆ ಈ ದಂಡ ಯಾವುದೇ ಪರಿಣಾಮ ಬೀರುವುದಿಲ್ಲ. ಇತರ ಟೆಕ್ ದಿಗ್ಗಜ ಸಂಸ್ಥೆಗಳಿಗೆ ಸಂದೇಶ ರವಾನಿಸಿದಂತಾಗದೆ ಎಂದು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಕಿನ್ಸ್ಟೈನ್ ಹೇಳಿದ್ದಾರೆ