ಗೃಹಲಕ್ಷ್ಮಿ ಯೋಜನೆಗಾಗಿ ಕಾಂಗ್ರೆಸ್ ನಿಂದ ಶೀಘ್ರವೇ ಮಹಿಳೆಯರ ನೋಂದಣಿ ಅಭಿಯಾನ: ಡಿಕೆ ಶಿವಕುಮಾರ್

ದಾವಣಗೆರೆ: ರಾಜ್ಯದ ಮಹಿಳೆಯರ ಕಲ್ಯಾಣಕ್ಕಾಗಿ  ತಮ್ಮ ಪಕ್ಷ ಘೋಷಿಸಿರುವ ‘ಗೃಹ ಜ್ಯೋತಿ ಯೋಜನೆ’ ಮತ್ತು ‘ಗೃಹ ಲಕ್ಷ್ಮಿ’ಗೆ ಕಾಂಗ್ರೆಸ್ ಬೃಹತ್ ನೋಂದಣಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಇದರಂತೆ ಪ್ರತಿ ಮಹಿಳೆಗೆ ಮಾಸಿಕ 2,000 ರೂಪಾಯಿ ನಗದು ಸಹಾಯವನ್ನು ನೀಡಲಾಗುತ್ತದೆ. ಇನ್ನು ಕೆಲವೇ ತಿಂಗಳುಗಳಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ‘ಗೃಹ ಜ್ಯೋತಿ ಯೋಜನೆ’ ಅಡಿಯಲ್ಲಿ 200 ಯೂನಿಟ್‌ಗಳ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ.    

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಮಾದರಿಯಲ್ಲೇ , ಕ್ಷದ ಕಾರ್ಯಕರ್ತರಿಂದಲೇ ನೋಂದಣಿ ಮಾಡಲಾಗುವುದು ಎಂದರು. ಈ ಯೋಜನೆಗಳ ಮೂಲಕ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 18,000 ಯೂನಿಟ್ ಉಚಿತ ವಿದ್ಯುತ್ (ತಿಂಗಳಿಗೆ 1,500 ರೂ. 200 ಯೂನಿಟ್) ಮತ್ತು 24,000 (ಪ್ರತಿ ತಿಂಗಳಿಗೆ 2,000 ರೂ.) ಆರ್ಥಿಕ ನೆರವು ನೀಡುತ್ತದೆ ಎಂದು ಅವರು ಹೇಳಿದರು.

ಶಿವಕುಮಾರ್ ಅವರು, ಅಧಿಕಾರಕ್ಕೆ ಬಂದರೆ, ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ಪಕ್ಷವು ಮರು ತನಿಖೆ ಮಾಡುತ್ತದೆ ಎಂದು ಹೇಳಿದರು.

ವಿಧಾನಸಭೆ  ಚುನಾವಣೆಯಲ್ಲಿ ಕಾಂಗ್ರೆಸ್ 135 ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಹಿಂದಿನ ಸಾಧನೆಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ತಿಳುವಳಿಕೆ ನೀಡಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೋವಿಡ್ -19 ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ ಕಾಂಗ್ರೆಸ್ ಹಿರಿಯ ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬದಿಂದ ದಾವಣಗೆರೆ ಜಿಲ್ಲೆಯಾದ್ಯಂತ 16 ಕೋಟಿ ರೂಪಾಯಿ ಉಚಿತ ಲಸಿಕೆ ಅಭಿಯಾನವನ್ನು ಶಿವಕುಮಾರ್ ಸ್ಮರಿಸಿದರು.

Latest Indian news

Popular Stories