ಚಿಂತನ ಶಿಬಿರದಲ್ಲಿ ಇವಿಎಂ ವಿಷಯ ಪ್ರಸ್ತಾಪ:ಸರ್ವಪಕ್ಷ ಸಭೆಯಲ್ಲಿ ಮಾತಾಡೋಣ ಎಂದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್ ನ ಚಿಂತನ್ ಶಿಬಿರದಲ್ಲಿ ಇವಿಎಂ ವಿಷಯದ ಬಗ್ಗೆ ಚರ್ಚೆಯಾಗಿದ್ದು ಬ್ಯಾಲಟ್ ಪೇಪರ್ ಪದ್ಧತಿಗೆ ಮರಳಿ ಹೋಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಒಂದು ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ವಿಷಯ ಎಲ್ಲಾ ಪಕ್ಷಗಳಿಗೂ ಸಂಬಂಧಿಸಿದ್ದಾಗಿದ್ದು ಸರ್ವಪಕ್ಷ ಸಭೆಯಲ್ಲಿ ಪ್ರಸ್ತಾಪಿಸೋಣ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಣಯ ಮಂಡಿಸುವುದು ಪ್ರಸ್ತಾವನೆಯಾಗಿತ್ತು. ಆದರೆ ಶಿಬಿರ ಆಂತರಿಕ ವಿಷಯಗಳನ್ನು ಚರ್ಚಿಸಲು ಆಯೋಜಿಸಲಾಗಿದ್ದು, ಇವಿಎಂ ವಿಷಯವನ್ನು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಬೇಕೆಂಬ ಸಲಹೆಯನ್ನು ಹಲವು ಕಾಂಗ್ರೆಸ್ ನಾಯಕರು ನೀಡಿದರು.

ಹಲವು ಕಾಂಗ್ರೆಸ್ ನಾಯಕರು ತಮಗೆ ಚುನಾವಣೆಗಳಲ್ಲಿ ಸೋಲುಂಟಾಗುತ್ತಿರುವುದಕ್ಕೆ ಇವಿಎಂ ಕಾರಣ ಎಂದು ದೂರಿದ್ದಾರೆ. ಇನ್ನು ಆ.15 ರಿಂದ ರಾಹುಲ್ ಗಾಂಧಿ ಜನತೆಯನ್ನು ತಲುಪಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆಯನ್ನು ಕೈಗೊಳ್ಳಲಿದ್ದಾರೆ.

Latest Indian news

Popular Stories