ಚುನಾವಣಾಧಿಕಾರಿ ಮೇಲೆ ಹಲ್ಲೆ, ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ

ಲಖನೌ: ಚುನಾವಣಾಧಿಕಾರಿಯೊಬ್ಬರ ಮೇಲಿನ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಇಲ್ಲಿನ ನ್ಯಾಯಾಲಯವೊಂದು  ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.

ಸಾರ್ವಜನಿಕ ಸೇವೆಯ ಅಧಿಕಾರಿ ಕರ್ತವ್ಯ ನಿರ್ವಹಿಸುವಲ್ಲಿ ಅಡ್ಡಿ ಮತ್ತಿತರ ಮೂರು ಅಪರಾಧಗಳಲ್ಲಿ ರಾಜ್ ಬಬ್ಬರ್ 
ತಪಿಸ್ಥರಾಗಿದ್ದು, ಅವರಿಗೆ ನ್ಯಾಯಾಲಯ ರೂ. 8,500 ದಂಡ ವಿಧಿಸಿದೆ.

1996ರ ಮೇ ತಿಂಗಳಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ರಾಜ್ ಬಬ್ಬರ್ ವಿರುದ್ಧ ಚುನಾವಣಾಧಿಕಾರಿ ಎಫ್ ಐಆರ್ ದಾಖಲಿಸಿದ್ದರು. ಆ ಸಂದರ್ಭದಲ್ಲಿ ರಾಬ್ ಬಬ್ಬರ್ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 

Latest Indian news

Popular Stories