ಚುನಾವಣೆ ಅಕ್ರಮ: 1042 ಎಫ್ಐಆರ್, 126 ಕೋಟಿ ರೂಪಾಯಿ ಮೌಲ್ಯದ ಹಣ ಜಪ್ತಿ!

ಬೆಂಗಳೂರು: ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿ ಮಾ.29 ರಿಂದ ಜಾರಿಯಲ್ಲಿರುವ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದಲ್ಲಿ 1,000 ಎಫ್ಐಆರ್ ದಾಖಲಾಗಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಹಾಗೂ ಉಚಿತ ಕೊಡುಗೆಗಳನ್ನು ನೀಡುವ ಪ್ರಕರಣಗಳಿಗೆ ಸಂಬಂಧಿಸಿದ ಎಫ್ಐಆರ್ ಗಳು ಇದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಈ ವರೆಗೂ ಒಟ್ತು 126.14 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 47 ಕೋಟಿ ರೂಪಾಯಿಗಳ ನಗದು, 29 ಕೋಟಿ ರೂಪಾಯಿ ಮೌಲ್ಯದ ಮದ್ಯ, 20 ಕೋಟಿ ರೂಪಾಯಿ ಮೌಲ್ಯದ  ಬೆಲೆಬಾಳುವ ಲೋಹಗಳು, 17 ಕೋಟಿ ರೂಪಾಯಿ ಮೌಲ್ಯದ ಉಚಿತ ಕೊಡುಗೆಗಳು, 13 ಕೋಟಿ ರೂಪಾಯಿಗಳ ಡ್ರಗ್ಸ್/ ನಾರ್ಕೊಟಿಕ್ಸ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯೋಗದ ಅಧಿಕಾರಿ ಹೇಳಿದ್ದಾರೆ.

ಮೇ.10 ರ ಚುನಾವಣೆ ಘೋಷಣೆಗೆ ಮುನ್ನ 58 ಕೋಟಿ ರೂಪಾಯಿಗಳಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories