ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರ ನೋವು ತಂದಿದೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ನೋವು ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ನಮಗೆ ಆದರ್ಶವಾಗಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡಲು ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಜಗದೀಶ್ ಶೆಟ್ಟರ್  ಹಿರಿಯ ನಾಯಕರು. ಅವರ ರಾಜೀನಾಮೆ ಘೋಷಣೆ ನೋವು ತಂದಿದೆ. ಇಂತಹ ನಿರ್ಧಾರದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದ್ದು, ಈ ಡ್ಯಾಮೇಜ್ ಕಂಟ್ರೋಲ್ ಗೆ ತಂತ್ರ ರೂಪಿಸುತ್ತೇವೆಂದು ಹೇಳಿದರು.

ಶೆಟ್ಟರ್ ಅವರನ್ನು ಬೇಟಿ ಮಾಡಿದ್ದ ಕೇಂದ್ರ ನಾಯಕತ್ವ ದೊಡ್ಡ ಹುದ್ದೆ ಕೊಡುತ್ತೇವೆಂದು ಹೇಳಿದ್ದರು. ದೆಹಲಿ ಮಟ್ಟದಲ್ಲಿ ಹುದ್ದೆ ನೀಡುವುದಾಗಿ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರು ಭರವಸೆ ನೀಡಿದ್ದರು. ನಿನ್ನೆ ಕೂಡ ನಾನು ಶೆಟ್ಟರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಮುಂದಿನ ಪೀಳಿಗೆ ನಾಯಕತ್ವ ಬೆಳೆಸುವ ಉದ್ದೇಶದಿಂದ ಶೆಟ್ಟರ್ ಅವರಿಗೆ ನೀಡಲಾಗಿಲ್ಲ. ಈಶ್ವರಪ್ಪ ಸೇರಿ ಹಲವು ನಾಯಕರಿಗೂ ಪಕ್ಷ ಟಿಕೆಟ್ ನೀಡಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿಯಲ್ಲಿ ವೀರಶೈವ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಹೆಚ್ಚು ಸೀಟ್ ನೀಡಿದ್ದು ಬಿಜೆಪಿ ಪಕ್ಷ. ಇದರಿಂದಾಗಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಅಭಿವೃದ್ಧಿಯಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮೊದಲ ಪೀಳಿಗೆ ಬೆಳೆದು ನಿಂತಿದೆ. 2ನೇ ಪೀಳಿಗೆಯಲ್ಲಿ ಸಿಸಿ ಪಾಟೀಲ್, ನಿರಾಣಿ ಸೋಮಣ್ಣ ಇದ್ದಾರೆ. ಶೆಟ್ಟರ್ ಮುಂದುವರೆಸಿಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅವರ ರಾಜೀನಾಮೆ ಘೋಷಣೆ ಕಸಿವಿಸಿ ತಂದಿದೆ ಎಂದು ತಿಳಿಸಿದರು.

Latest Indian news

Popular Stories