ಜರ್ಖಾಂಡ್ ನ್ಯಾಯಾಧೀಶರಿಗೆ ಉದ್ದೇಶಪೂರ್ವಕವಾಗಿ ಆಟೋ ರಿಕ್ಷಾ ಡ್ರೈವರ್ ಡಿಕ್ಕಿ ಹೊಡೆದಿದ್ದ – ಸಿಬಿಐನಿಂದ ನ್ಯಾಯಾಲಯಕ್ಕೆ ವಿವರಣೆ

ರಾಂಚಿ:ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರು ಜುಲೈನಲ್ಲಿ ಆಟೋರಿಕ್ಷಾಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಬೆಳಗಿನ ಜಾಗಿಂಗ್‌ನಲ್ಲಿ ಉದ್ದೇಶಪೂರ್ವಕವಾಗಿ ಆಟೋ ರಿಕ್ಷಾ ಡ್ರೈವರ್ ಗುದ್ದಿದ್ದ ಎಂದು ಸಿಬಿಐ ಹೈಕೋರ್ಟ್‌ಗೆ ತಿಳಿಸಿದೆ.

ಅಪರಾಧ ನಡೆದ ಘಟನೆಯ ಮರುನಿರ್ಮಾಣ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ವಿಡಿಯೋ ಫೂಟೇಜ್‌ನ 3 ಡಿ ವಿಶ್ಲೇಷಣೆ ಮತ್ತು ಲಭ್ಯವಿರುವ ವಿಧಿವಿಜ್ಞಾನ ಸಾಕ್ಷ್ಯಗಳು ನ್ಯಾ.ಉತ್ತಮ್ ಆನಂದ್‌ನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಕೊಲ್ಲಲಾಗಿದೆ ಎಂಬುವುದು ಸಾಬೀತು ಪಡಿಸುತ್ತದೆ ಎಂದು ಸಿಬಿಐ ಮಾಹಿತಿ ನೀಡಿದೆ.

ಕೊಲೆಯ ತನಿಖೆ ಅಂತಿಮ ಹಂತದಲ್ಲಿದೆ ಎಂದು ಸಂಸ್ಥೆ ಹೇಳಿದೆ. ಇದೀಗ ತನ್ನ ಪ್ರಕರಣವನ್ನು ಪೂರ್ಣಗೊಳಿಸಲು ವಿಧಿವಿಜ್ಞಾನ ವರದಿಗಳನ್ನು ದೈಹಿಕ ಸಾಕ್ಷ್ಯಾಧಾರಗಳೊಂದಿಗೆ ದೃಢೀಕರಿಸುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ನ್ಯಾ‌. ಉತ್ತಮ್ ಆನಂದ್ ಅವರು ಜುಲೈ 28 ರಂದು ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಮೃತಪಟ್ಟಿದ್ದರು. ನಂತರ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಅವರನ್ನು ಉದ್ದೇಶಪೂರ್ವಕವಾಗಿ ಕೊಂದಿರುವ ಕುರಿತು ಬಲವಾದ ಸಂಶಯ ವ್ಯಕ್ತವಾಗಿತ್ತು‌. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

Latest Indian news

Popular Stories

error: Content is protected !!