ಜೂಜು ಅಡ್ಡೆ ಮೇಲೆ ದಾಳಿ: 37 ಜನರ ಬಂಧನ, ಬೈಕ್‌, ನಗದು ಜಪ್ತಿ

ವಿಜಯಪುರ: ಅತಿ ದೊಡ್ಡ ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೋನಾಳ ಕೆನಾಲ್ ಬಳಿ ರವಿವಾರ ತಡರಾತ್ರಿ ನಡೆದಿದೆ.

ಪೊಲೀಸರ ಬಲೆಗೆ ಬಿದ್ದ 37 ಜನ ಜೂಜಾಟಗಾರರು ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ, ಗದಗ, ಯಾದಗಿರಿ, ವಿಜಯಪುರ ನೆರೆಯ ಮಹಾರಾಷ್ಟ್ರದಿಂದಲು ಜೂಜು ಆಡಲು ಬರ್ತಿದ್ದ ಜನರು ಲಾಕ್ ಆಗಿದ್ದಾರೆ.

ಬಸವನಬಾಗೇವಾಡಿ ಡಿವೈಎಸ್ಪಿ ಕರುನಾಳಕರ ಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿಗೈದು 4.75 ಲಕ್ಷ ನಗದು ಹಾಗೂ 16 ಬೈಕ್, 40ಕ್ಕು ಅಧಿಕ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Indian news

Popular Stories