ವಿಜಯಪುರ: ಜೆಡಿಎಸ್ ಪಕ್ಷದ ವಿರುದ್ಧ ಕಾರ್ಯಚಟುವಟಿಕೆ ಮಾಡಿದ್ದ ಆರು ಜನ ಮುಖಂಡರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ಹೇಳಿದರು.
ವಿಜಯಪುರ ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಬಾಗೇಬಾಡಿಯ ಜೆಡಿಎಸ್ ನಾಯಕಿ ವಿದ್ಯಾ ಪಾಟೀಲ ಬ್ಲ್ಯಾಕ್‌ಮೇಲ್ ತಂತ್ರ ಮಾಡುತ್ತಿದ್ದಾರೆ. ಈಗಾಗಲೇ ಜೆಡಿಎಸ್ ನಾಯಕರ ವಿರುದ್ಧ ಆಡಿಯೋ, ವಿಡಿಯೋ ರಾಜ್ಯ ನಾಯಕರಿಗೆ ಕಳುಹಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿ ಆಗುತ್ತಿದೆ. ಅಲ್ಲದೇ, ವಿದ್ಯಾ ಪಾಟೀಲ್ ನಮ್ಮ ಪಕ್ಷದವರು ಅಲ್ಲ. ಬಿಜೆಪಿ ಪಕ್ಷದವರು ಎಂದರು. ನಾನು ಯಾರಿಗೂ ಚಾಕು ಹಾಕಿಲ್ಲ. ಗೂಂಡಾಗಿರಿನೂ ಮಾಡಿಲ್ಲ. ಅಲ್ಲದೇ, ಜಿಲ್ಲೆಯ ಏಳು ಮತಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿ ದ್ರೋಹ ಎಸಗಿದ್ದಾರೆ. ಅದಕ್ಕಾಗಿ
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸ್ನೇಹಲತಾ ಶೆಟ್ಟಿ, ಮುಖಂಡರಾದ ಯಾಕೂಬ್ ಕೂಪರ್, ಅಕ್ಬರ್ ಮುಲ್ಲಾ, ದಸ್ತಗಿರಿ ಸಾಲೋಟಗಿ, ಸಂಶುದ್ದಿನ ಮುಲ್ಲಾ, ಯೂತ್ ಘಟಕದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಪಾಟೀಲ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇನ್ನು ಪಕ್ಷದ ವಿರುದ್ಧ ಚಟುವಟಿಕೆ ಸಹಿಸಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷ ಕುರ್ಚಿ ನಮ್ಮ ಅಜ್ಜಂದು ಅಲ್ಲ. ಅದಕ್ಕಾಗಿ ಪಕ್ಷಕ್ಕಾಗಿ ದುಡಿಮೆ ಮಾಡಬೇಕು. ಪಕ್ಷದ ವಿರುದ್ಧ ಕೆಲಸ ಮಾಡಿದ್ರೇ ಕಠಿಣ ಕ್ರಮ ತೆಗದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.