ಜೈಪುರ ಬಂದಿಳಿದ ನ್ಯೂಝಿಲೆಂಡ್ ಕ್ರಿಕೆಟ್ ತಂಡ

ಜೈಪುರ: ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ನ್ಯೂಜಿಲೆಂಡ್ ತಂಡ ಚಾರ್ಟರ್ ವಿಮಾನವೊಂದರಲ್ಲಿ ರಾಜಸ್ಥಾನದ ಜೈಪುರಕ್ಕೆ ಇಂದು ಬಂದಿಳಿತು.

ಬಯೋ ಬಬಲ್ ನಿಂದ ಬಬಲ್ ಗೆ ವರ್ಗಾವಣೆಯಾಗುತ್ತಿರುವುದರಿಂದ ಕಿವೀಸ್ ತಂಡ ಬುಧವಾರ ಆತಿಥೇಯ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೂ ಮುನ್ನ ಕ್ವಾರಂಟೈನ್ ಗೆ ಒಳಪಡುತ್ತಿಲ್ಲ.

ನ್ಯೂಜಿಲೆಂಡ್ ತಂಡ ಸೋಮವಾರ ಸಂಜೆ ಜೈಪುರಕ್ಕೆ ಬಂದಿಳಿಯಿತು. ಅವರು ನಾಳೆ ಅಭ್ಯಾಸದಲ್ಲಿ ಪಾಲ್ಗೊಳ್ಳುವ ಮುನ್ನ ಶಿಷ್ಟಾಚಾರದ ಪ್ರಕಾರ ಪರೀಕ್ಷೆ ನಡೆಸಲಾಗುವುದು ಎಂದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಬುಧವಾರ, ಶುಕ್ರವಾರ ಹಾಗೂ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ನಂತರ ಉಭಯ ತಂಡಗಳು ಎರಡು ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸಲಿವೆ.

Latest Indian news

Popular Stories

error: Content is protected !!