ಬೆಂಗಳೂರು/ದಾಸರಹಳ್ಳಿ: ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆಯೇ ರಾಜ್ಯ ರಾಜಕಾರಣದಲ್ಲಿ ವಾಕ್ಸಮರ ಬಿರುಸು ಗೊಂಡಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಟ್ಟುಬಿಡದೆ ಪರಸ್ಪರ ಕೆಸರೆರಚಾಟ, ವಾಗ್ಯುದ್ಧದಲ್ಲಿ ತೊಡಗಿದ್ದಾರೆ. ಕೆಲವು ನಾಯಕರಂತೂ ದಿನಕ್ಕೊಂದು ಬಾಂಬ್ ಸಿಡಿಸಲಾರಂಭಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶೃಂಗೇರಿ ಮಠ ಒಡೆದಿರುವ ಮಹಾರಾಷ್ಟ್ರದ ಪೇಶ್ವೆ ವಂಶಸ್ಥ ಪ್ರಹ್ಲಾದ ಜೋಷಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆರೆಸ್ಸೆಸ್ ನಿರ್ಧಾರ ಮಾಡಿದೆ ಎಂದು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿ ವಿವಾದದ ಬಾಂಬ್ ಸಿಡಿಸಿದ್ದಾರೆ.
ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಕೆಂಡಾ ಮಂಡಲವಾಗಿರುವ ಬಿಜೆಪಿ ನಾಯಕರು ಕುಮಾರ ಸ್ವಾಮಿ ವಿರುದ್ಧ ಮುಗಿಬಿದ್ದಿದ್ದು, ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
“ಜೆಡಿಎಸ್ ಪಂಚರತ್ನ ಯಾತ್ರೆಯ ಬದಲು ನವಗ್ರಹ ಯಾತ್ರೆ ಮಾಡಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಎಚ್.ಡಿ. ಕುಮಾರಸ್ವಾಮಿ, “ಬ್ರಾಹ್ಮಣ’ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ದಾಸರಹಳ್ಳಿಯಲ್ಲಿ ಆಯೋ ಜಿಸ ಲಾಗಿದ್ದ ಪಂಚರತ್ನ ಯಾತ್ರೆ ಯಲ್ಲಿ ರವಿವಾರ ಮಾತನಾಡಿದ ಕುಮಾರ ಸ್ವಾಮಿ, “ದಿಲ್ಲಿಯಲ್ಲಿ ಆರೆಸ್ಸೆಸ್ ಮುಖಂಡರ ಸಭೆ ನಡೆದಿದ್ದು, ಪ್ರಹ್ಲಾದ್ ಜೋಷಿ ಅವರನ್ನು ಸಿಎಂ ಮಾಡಿ, 8 ಮಂದಿಯನ್ನು ಉಪಮುಖ್ಯಮಂತ್ರಿ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಅವರು ನಿರ್ಧರಿಸಿರುವ ಸಿಎಂ ನಮ್ಮ ಹಳೇ ಕರ್ನಾಟಕದ ಬ್ರಾಹ್ಮಣರಲ್ಲ. ಬದಲಾಗಿ ಮಹಾರಾಷ್ಟ್ರ ಭಾಗದ ಪೇಶ್ವೆಗಳು’ ಎಂದಿದ್ದಾರೆ.
ಪ್ರದರ್ಶನ ಕೇಂದ್ರದಲ್ಲಿ “ಭಾರತ ಇಂಧನ ಸಪ್ತಾಹ’ವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಗುಬ್ಬಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿದರೆಹಳ್ಳಿ ಕಾವಲ್ನಲ್ಲಿ ಭಾಷಣ ಮಾಡಲಿದ್ದಾರೆ. ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆಯಿದೆ.
ಕುಮಾರಸ್ವಾಮಿಯವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ತ್ಯಾಗ, ಬಲಿದಾನ ಸಾಕಷ್ಟಿದೆ. ಯಾವುದೇ ಜಾತಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಮಾಜಿ ಸಿಎಂಗೆ ಶೋಭೆ ತರುವುದಿಲ್ಲ. ಅವರು ತತ್ಕ್ಷಣ ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು.
– ಆರ್. ಅಶೋಕ್, ಕಂದಾಯ ಸಚಿವ
ಎಂಟು ಮಂದಿ ಉಪ ಮುಖ್ಯಮಂತ್ರಿಗಳು ಎಂದು ಅವರ ಮನೆಯೊಳಗಿರುವವರನ್ನೇ ನೋಡಿ ಹೇಳಿರಬಹುದು. ಏಕೆಂದರೆ ಅವರದು ಕುಟುಂಬ ರಾಜಕಾರಣ. ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಸಂಘದ ವಿಚಾರದ ಬಗ್ಗೆ ಎಚ್ಚರಿಕೆಯಿಂದ ಮಾತನಾಡಲಿ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ