ಜ. 20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ: ವೈವಿಧ್ಯ ಕಾರ್ಯಕ್ರಮ

ಉಡುಪಿ: ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ಆಯೋಜಕತ್ವದಲ್ಲಿ ಜ. 20ರಿಂದ 22ರ ತನಕ ಮಲ್ಪೆಯಲ್ಲಿ ಬೀಚ್‌ ಉತ್ಸವ-2023 ನಡೆಯಲಿದೆ.

ಜ. 20ರಿಂದ 22ರ ತನಕ ಗಾಳಿಪಟ ಉತ್ಸವ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಮರಳು ಶಿಲ್ಪ ಪ್ರದರ್ಶನ, ಫ‌ುಡ್‌ ಫೆಸ್ಟಿವಲ್‌, ಜ. 21, 22ರಂದು ಈಜು ಸ್ಪರ್ಧೆ, ಪುರುಷರಿಗೆ ಕಬಡ್ಡಿ ಪಂದ್ಯಾಟ, ಜ. 22ರಂದು ಶ್ವಾನ ಪ್ರದರ್ಶನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ಥ್ರೋಬಾಲ್‌ ಪಂದ್ಯಾಟ ನಡೆಯಲಿದೆ.

ಪ್ರತೀ ದಿನ ಸಂಜೆ 6ರಿಂದ ರಾತ್ರಿ 10ರ ವರೆಗೆ ಸಂಗೀತ ರಸಮಂಜರಿ ನಡೆಯಲಿದ್ದು, ಜ. 20ರಂದು ರಾಜೇಶ್‌ ಕೃಷ್ಣನ್‌ ಮತ್ತು ಚಂದನ್‌ ಶೆಟ್ಟಿ, ಜ. 21ರಂದು ಕುನಾಲ್‌ ಗಾಂಜಾವಾಲ, ಜ. 22ರಂದು ರಘು ದೀಕ್ಷಿತ್‌ ಸಂಗೀತ ರಸಧಾರೆ ಹರಿಯಲಿದೆ ಎಂದು ಪ್ರಕಟನೆ ತಿಳಿಸಿದೆ.


ಪ್ರವಾಸೋದ್ಯಮವನ್ನು ಉತ್ತೇಜಿಸುವ ನೆಲೆಯಲ್ಲಿ ಮೂರು ದಿನಗಳ ಕಾಲ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಅದ್ದೂರಿ ಮತ್ತು ವಿಶೇಷವಾಗಿ ಬೀಚ್‌ ಉತ್ಸವ ಆಯೋಜಿಸ ಲಾಗು ತ್ತಿದೆ. ಈಗಾಗಲೇ ಜಿಲ್ಲಾ ದ್ಯಂತ ರಜತ ಮಹೋತ್ಸವ ಪ್ರಚಾರ ರಥ ಓಡಾಡುತ್ತಿದೆ. ಉತ್ಸವದಲ್ಲಿ ವಿನೂತನ ಬಗೆಯ ವಾಟರ್‌ ನ್ಪೋರ್ಟ್ಸ್ಗಳನ್ನು ಪರಿ ಚಯಿಸಲಾಗುತ್ತಿದೆ. ಈಜು ಸ್ಪರ್ಧೆ, ಕಬಡ್ಡಿ, ಮರಳು ಶಿಲ್ಪ ಪ್ರದರ್ಶನ, ಆಹಾರ ಮೇಳ ಸಹಿತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಖ್ಯಾತ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. 2,500 ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಜ. 21 ಮತ್ತು 22ರಂದು ಆಗಮಿಸುವ ಸಾರ್ವಜನಿಕರಿಗೆ ಪಾರ್ಕಿಂಗ್‌ ಶುಲ್ಕ ವಿಧಿಸುವುದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಉತ್ಸವ ಹೊಸ ದಿಕ್ಕು ತೋರಲಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

Latest Indian news

Popular Stories