ಟರ್ಕಿ-ಸಿರಿಯಾ ಭೂಕಂಪ: 21 ಸಾವಿರಕ್ಕೂ ಅಧಿಕ ಮಂದಿ ಮೃತ್ಯು – ಮುಂದುವರಿದ ಶೋಧ ಕಾರ್ಯ

ಸೋಮವಾರ ಸಂಭವಿಸಿದ ಭಾರೀ ಭೂಕಂಪದ ನಂತರ ಸಿರಿಯಾ ಮತ್ತು ಟರ್ಕಿಯಲ್ಲಿ 21,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ರೌಂಡ್-ದಿ-ಕ್ಲಾಕ್ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಆದರೆ ಹಿಮ ಮತ್ತು ಮಳೆ ಬದುಕುಳಿದವರ ಕಷ್ಟವನ್ನು ಹೆಚ್ಚಿಸುತ್ತಿದೆ.

ಟರ್ಕಿ-ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 21,000 ದಾಟಿದೆ. ಟರ್ಕಿಯಲ್ಲಿ 17,674 ಜನರು ಮತ್ತು ಸಿರಿಯಾದಲ್ಲಿ 3,377 ಜನರು ಸಾವನ್ನಪ್ಪಿದ್ದಾರೆ. ಇದು ದೃಢಪಡಿಸಿದ ಸಾವಿನ ಸಂಖ್ಯೆ ಒಟ್ಟು 21,051 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳಡಿಯಲ್ಲಿ ಇನ್ನೂ ಸಿಲುಕಿರುವವರನ್ನು ರಕ್ಷಿಸಲು ನಾಲ್ಕನೇ ದಿನವೂ ರಕ್ಷಣಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

Latest Indian news

Popular Stories