ಟಿ-20 ವರ್ಲ್ಡ್ ಕಪ್ ಸೆಮಿಫೈನಲ್ಸ್: ಮಳೆ ಬಂದರೆ ಏನಾಗುತ್ತೆ ಗೊತ್ತಾ?

ದುಬೈ: ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿದೆ. ಪಾಕಿಸ್ತಾನ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಗ್ರೂಪ್ ಹಂತದಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿ ಸೆಮಿ ಫೈನಲ್‌ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಾಗಿದೆ.

ಬುಧವಾರ ಮತ್ತು ಗುರುವಾದ ಸೆಮಿಫೈನಲ್ಸ್ ಪಂದ್ಯ ನಡೆಯಲಿದ್ದು ಬುಧವಾ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ಮೊದಲ ಸೆಮಿಫೈನಲ್ಸ್ ಪಂದ್ಯ ನಡೆಯಲಿದೆ. ಗುರುವಾರದಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದ ನಡುವೆ ಹಣಾಹಣಿ ನಡೆಯಲಿದೆ.

ಸೆಮಿಫೈನಲ್ಸ್ ಯಾವುದೇ ಕಾರಣಕ್ಕೂ ನಡೆಯುವಂತೆ ಮಾಡಲು ಮೀಸಲು ದಿನ ಕೂಡ ನಿಗದಿ ಪಡಿಸಲಾಗಿದೆ. ಮಳೆ ಅಥವಾ ಇನ್ನಿತರ ಕಾರಣಕ್ಕೆ ಪಂದ್ಯ ಮುಂದೂಡಿದರೆ ಕನಿಷ್ಠ ಪಕ್ಷ ಐದು ಒವರ್ ಆದರೂ ಆಡಿಸುವ ಯೋಜನೆ ಐಸಿಸಿಯದ್ದು.

ಒಂದು ವೇಳೆ ಪಂದ್ಯ ಟೈ ಆದರೆ ಸೂಪರ್ ಒವರ್ ನಡೆಸಲಾಗುವುದು. ಒಂದು ವೇಳೆ ಸೂಪರ್ ಒವರ್ ಕೂಡ ಟೈ ಆದರೆ ಮತ್ತೆ ಮತ್ತೆ ಸೂಪರ್ ಒವರ್ ಆಡಿಸಲಾಗುತ್ತದೆ.

Latest Indian news

Popular Stories

error: Content is protected !!