ಟಿ-20 ವಿಶ್ವಕಪ್ ದ್ವಿತೀಯ ಸೆಮಿಫೈನಲ್ಸ್: ಆಸ್ಟ್ರೇಲಿಯಾ vs ಪಾಕಿಸ್ತಾನ

ದುಬೈ: ಇಂದು ದ್ವಿತೀಯ ಸೆಮಿಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡದ ನಡುವೆ ನಡೆಯಲಿದೆ.

ಎರಡೂ ತಂಡಗಳು ಕ್ರಿಕೆಟ್ ದೈತ್ಯರಾಗಿದ್ದು ಬಲಿಷ್ಠ ಆಟಗಾರರನ್ನು ಹೊಂದಿದೆ. ಈಗಾಗಲೇ ನ್ಯೂಝಿಲೆಂಡ್ ರೋಚಕವಾಗಿ ಗೆದ್ದು ಫೈನಲ್ ಪ್ರವೇಶಿಸಿದೆ. ಇತ್ತ ಪಾಕಿಸ್ತಾನ ಅಜೇಯವಾಗಿ ಸೆಮಿಫೈನಲ್ಸ್ ಪ್ರವೇಶಿಸಿದ್ದರೆ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳಲ್ಲಿ ಗೆದ್ದು ಸೆಮಿ ಹಾದಿ ಹಿಡಿದಿತ್ತು.

ಪಾಕಿಸ್ತಾನ ತಂಡದ ಆರಂಭಿಕ ಆಟಗಾರರಾದ ಬಾಬರ್ ಅಝಮ್ ಮತ್ತು ರಿಝ್ವಾನ್ ಪ್ರಚಂಡ ಫಾರ್ಮ್ ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವುದು ಗಮನಾರ್ಹ. ಆಸ್ಟ್ರೇಲಿಯಾ ಕೂಡ ಅರೆನ್ ಫಿಂಚ್, ಡೆವೀಡ್ ವಾರ್ನರ್, ಸ್ಟೀವ್ ಸ್ಮಿತ್,ಮ್ಯಾಕ್ಸ್‌ವೆಲ್ ನಂತಹ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಪಾಕಿಸ್ತಾನದಲ್ಲಿ ಹಾಫೀಝ್, ಶೊಯೇಬ್ ಮಲಿಕ್ ರಂತಹ ಮ್ಯಾಚ್ ವಿನ್ನರ್ ಹಿಟ್ಟರ್ ಗಳು ಕೂಡ ಈ ಪಂದ್ಯದ ಆಕರ್ಷಣೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನದಷ್ಟೇ ಆಸ್ಟ್ರೇಲಿಯಾ ಬಲಿಷ್ಠವಾಗಿದೆ. ಶಾಹಿನ್ ಅಫ್ರಿದಿ, ರವೂಫ್, ಹಸನ್ ಅಲಿ, ಇಮಾದ್ ದಾಳಿ ಒಂದು ಕಡೆಯಾದರೆ ಮಿಚೆಲ್ ಸ್ಟಾರ್ಕ್ ನೇತೃತ್ವದ ಬಲಿಷ್ಠ ಬೌಲಿಂಗ್ ಆಸ್ಟ್ರೇಲಿಯಾ ಕೂಡ ಹೊಂದಿದೆ.

ಇಂದು ಗೆದ್ದವರು ನೇರವಾಗಿ ರವಿವಾರ ನ್ಯೂಝಿಲೆಂಡ್ ತಂಡದ ಎದುರು ಫೈನಲ್ ಪಂದ್ಯ ಆಡಲಿದ್ದಾರೆ.

Latest Indian news

Popular Stories

error: Content is protected !!