ಟಿ – 20 ವಿಶ್ವಕಪ್ ಮೊದಲ ಸೆಮಿಫೈನಲ್ಸ್: ಇಂಗ್ಲೆಂಡ್ ವಿರುದ್ಧ ರೋಚಕವಾಗಿ ಗೆದ್ದು ಫೈನಲ್ ಪ್ರವೇಶಿಸಿದ ನ್ಯೂಝಿಲೆಂಡ್

ದುಬೈ: ಟಿ-20 ವಿಶ್ವಕಪ್ ಮೊದಲ ಸೆಮಿಫೈನಲ್ ನಲ್ಲಿ ನ್ಯೂಝಿಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 167 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ನಿಶಾಮ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರೋಚಕ ಜಯ ಸಾಧಿಸಿತು. ಈ ಮೂಲಕ ಫೈನಲ್ ಪ್ರವೇಶಿಸಿತು.

ಇಂಗ್ಲೆಂಡ್ ಪರ ಉತ್ತಮ ಬ್ಯಾಟಿಂಗ್ ಮಾಡಿದ ಮೊಯಿನ್ ಅಲಿ (51) ಅರ್ಧ ಶತಕ ದಾಖಲಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತೆ ನೋಡಿಕೊಂಡರು. ಮಲನ್ (41) ರನ್ ಬಾರಿಸಿದರು.

ನಂತರ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್ ನಿರಾಶಾದಾಯಕವಾಗಿ ಇನ್ನಿಂಗ್ಸ್ ಆರಂಭಿಸಿತು. ಗಪ್ಟಿಲ್ (4) ಮತ್ತು ವಿಲಿಯಮ್ಸನ್ (5) ಬೇಗ ಪೆವಿಲಿಯನ್ ಕಡೆ ಮುಖ ಮಾಡಿದರು. ನಂತರ ಕಾನ್ವೆ ಮತ್ತು ಮಿಚೆಲ್ ಉತ್ತಮ ಜೊತೆಯಾಟ ನಡೆಸಿದರು. ನಂತರ ಕಾನ್ವೈ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟಂಪ್ ಔಟಾದರು. ನಂತರ ನಿಶಾಮ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಸಿಕ್ಸರ್ ಗಳ ಮುಖಾಂತರ ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿಚೆಲ್ ಮಿಂಚಿನ ಅರ್ಧ ಶತಕ ದಾಖಲಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಇನ್ನಿಂಗ್ಸ್ ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರು.

Latest Indian news

Popular Stories

error: Content is protected !!