ಡಿಸೆಂಬರ್ ನಲ್ಲಿ 12 ದಿನ ಬ್ಯಾಂಕ್’ಗೆ ರಜೆ – ಇಲ್ಲಿದೆ ವಿವರ

ನವದೆಹಲಿ: ಕಳೆದ ಎರಡು ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಬಂದ ಕಾರಣ ಬ್ಯಾಂಕ್‌ ನೌಕರರಿಗೆ ಭರ್ಜರಿ ರಜೆಗಳು ಸಿಕ್ಕಿದ್ದವು. ಆದರೆ, ಡಿಸೆಂಬರ್‌ನಲ್ಲಿ ರಜಾ ದಿನಗಳು ಕಡಿಮೆ ಇದೆ. ಈ ತಿಂಗಳಲ್ಲಿ ಒಂದು ಸಾರ್ವತ್ರಿಕ ರಜಾ ದಿನವಿದೆ, ಅದೇ ಡಿಸೆಂಬರ್ 25ರ ಕ್ರಿಸ್‌ಮಸ್‌ ದಿನ. ಈ ದಿನ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೂ ರಜೆ ಇರಲಿದೆ. ಇದಲ್ಲದೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ರಜೆಗಳೂ ಇರಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ ಬ್ಯಾಂಕುಗಳಿಗೆ ಪ್ರದೇಶವಾರು ಆಧಾರದ ಮೇಲೆ ಒಟ್ಟು 12 ದಿನಗಳ ರಜೆ ಇರಲಿದೆ ಎಂದು ಆರ್‌ಬಿಐ (RBI)ತಿಳಿಸಿದೆ.

ಬ್ಯಾಂಕುಗಳು ಪ್ರತಿ ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಹೊಂದಿವೆ. ಇವುಗಳೂ ಸೇರಿದಂತೆ ಡಿಸೆಂಬರ್ ನಲ್ಲಿ ಬ್ಯಾಂಕುಗಳಿಗೆ 12 ದಿನಗಳ ರಜೆ ಇರಲಿದೆ. ಈ 12 ದಿನಗಳಲ್ಲಿ. 6 ಸಾಮಾನ್ಯ ರಜಾದಿನಗಳು ಮತ್ತು ಇತರೆ 6 ರಜಾದಿನಗಳು ಆಯಾ ಪ್ರದೇಶಗಳಲ್ಲಿನ ವಿಶೇಷ ರಜಾದಿನಗಳನ್ನು ಆಧರಿಸಿವೆ.

ಡಿಸೆಂಬರ್ ಬ್ಯಾಂಕ್ ರಜಾ ದಿನಗಳ ಪಟ್ಟಿ
ಡಿಸೆಂಬರ್ 3- ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ಸಮಯದಲ್ಲಿ ಪಣಜಿಯಲ್ಲಿ ಬ್ಯಾಂಕ್ ರಜಾದಿನ
ಡಿಸೆಂಬರ್ 5 – ಭಾನುವಾರ (ರಜಾದಿನ)
ಡಿಸೆಂಬರ್ 11- ಶನಿವಾರ (ತಿಂಗಳ ಎರಡನೇ ಶನಿವಾರ)
ಡಿಸೆಂಬರ್ 12- ಭಾನುವಾರ (ರಜಾದಿನ)
ಡಿಸೆಂಬರ್ 18- ಥಾಮ್ ಪುಣ್ಯತಿಥಿ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 19- ಭಾನುವಾರ (ರಜಾದಿನ)
ಡಿಸೆಂಬರ್ 24- ಕ್ರಿಸ್ ಮಸ್ ಈವ್ (ಐಜ್ವಾಲ್ ನಲ್ಲಿ ಬ್ಯಾಂಕ್ ರಜೆ)
ಡಿಸೆಂಬರ್ 25- ಕ್ರಿಸ್ ಮಸ್ ಈವ್, ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ಡಿಸೆಂಬರ್ 26- ಭಾನುವಾರ (ರಜಾದಿನ)
ಡಿಸೆಂಬರ್ 27- ಕ್ರಿಸ್ ಮಸ್ ಆಚರಣೆ (ಐಜ್ವಾಲ್ ನಲ್ಲಿ ಬ್ಯಾಂಕ್ ರಜಾದಿನ)
ಡಿಸೆಂಬರ್ 30- ಯು ಕಿಯಾಂಗ್ ನೊಂಗ್ಬಾ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ಹಾಲಿಡೇ)
ಡಿಸೆಂಬರ್ 31- ಹೊಸ ವರ್ಷದ ಮುನ್ನಾದಿನ (ಐಜ್ವಾಲ್ ನಲ್ಲಿ ಬ್ಯಾಂಕ್ ರಜಾದಿನ)

Latest Indian news

Popular Stories

error: Content is protected !!