ಡಿ.30ಕ್ಕೆ ರಾಜ್ಯದ ಹಣಕಾಸು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 30 ರಂದು ರಾಜ್ಯಗಳ ಹಣಕಾಸು ಸಚಿವರೊಂಜಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 30 ರಂದು ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ನಡೆದ ಇತರಕ್ಕಿಂತ ಭಿನ್ನವಾಗಿ ಇದು ಭೌತಿಕ ಸಭೆಯಾಗಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ಕೊನೆಯ ವಾರದಲ್ಲಿ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಫೆಬ್ರವರಿ 1 ರಂದು ಬಜೆಟ್ 2022-23 ಅನ್ನು ಮಂಡಿಸುವ ಸಾಧ್ಯತೆಯಿದೆ.

ಸೀತಾರಾಮನ್ ಅವರು ಕೈಗಾರಿಕೆಗಳ ಪಾಲುದಾರರು, ಹಣಕಾಸು ವಲಯದ ಹೂಡಿಕೆದಾರರು, ಕಾರ್ಮಿಕ ಸಂಘಟನೆಗಳು, ಕೃಷಿಕರು ಮತ್ತು ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಸಭೆಗಳನ್ನು ನಡೆಸಿದ್ದು, ತರ್ಕಬದ್ಧ ಆದಾಯ ತೆರಿಗೆ ಸ್ಲ್ಯಾಬ್‌, ಡಿಜಿಟಲ್ ಸೇವೆಗಳಿಗೆ ಮೂಲಸೌಕರ್ಯ ಮತ್ತಿತರ ಸಲಹೆಗಳನ್ನು ಪಡೆದಿದ್ದಾರೆ. ಡಿಸೆಂಬರ್ 15 ಮತ್ತು ಡಿಸೆಂಬರ್ 22 ರ ನಡುವೆ ಅಂತಹ ಎಂಟು ಸಭೆಗಳನ್ನು ನಡೆಸಲಾಗಿದೆ ಎಂದು ಕಳೆದ ವಾರ ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ನಿಗದಿಪಡಿಸಲಾದ ಎಂಟು ಸಭೆಗಳಲ್ಲಿ ಏಳು ಪಾಲುದಾರ ಗುಂಪುಗಳನ್ನು ಪ್ರತಿನಿಧಿಸುವ 120 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದಾರೆ ಎಂದು ಅದು ಹೇಳಿದೆ. ಇದು ಮೋದಿ 2.0 ಸರ್ಕಾರ ಮತ್ತು ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಆಗಿದೆ.

Latest Indian news

Popular Stories