ತಂಡದ ಆಯ್ಕೆಗೂ ಒಂದೂವರೆ ಗಂಟೆ ಮುಂಚೆ ನನಗೆ ತಿಳಿಸಿದ್ರು: ನಾಯಕತ್ವದಿಂದ ಕಿತ್ತು ಹಾಕಿದ ಬಗ್ಗೆ ಕೊಹ್ಲಿ ಹೇಳಿದ್ದು!

ನವದೆಹಲಿ: ಟೀಂ ಇಂಡಿಯಾದ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ಆಯ್ಕೆ ಸಮಿತಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಮೊದಲು ತಮ್ಮ ಮತ್ತು ಆಯ್ಕೆಗಾರರ ​​ನಡುವೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ರೋಹಿತ್ ಶರ್ಮಾ ಅವರನ್ನು ಕಳೆದ ವಾರ ಭಾರತದ ನೂತನ ಏಕದಿನ ನಾಯಕರನ್ನಾಗಿ ನೇಮಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಸಿದ್ಧವಾಗುತ್ತಿದ್ದಂತೆ ಕೊಹ್ಲಿಯಿಂದ ಅಧಿಕಾರ ವಹಿಸಿಕೊಂಡರು.

ಟೆಸ್ಟ್ ಸರಣಿಗಾಗಿ 8ರಂದು ನಡೆಯುವ ಆಯ್ಕೆ ಸಭೆಗೂ ಒಂದೂವರೆ ಗಂಟೆ ಮೊದಲು ನನ್ನನ್ನು ಸಂಪರ್ಕಿಸಲಾಗಿತ್ತು. T20I ನಾಯಕತ್ವಕ್ಕೆ ರಾಜಿನಾಮೆ ನಿರ್ಧಾರವನ್ನು ಘೋಷಿಸಿದ ನಂತರ ಡಿಸೆಂಬರ್ 8ರವರೆಗೆ ನನ್ನೊಂದಿಗೆ ಯಾವುದೇ ಪೂರ್ವ ಸಂವಹನ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

Latest Indian news

Popular Stories

error: Content is protected !!