ತನಿಖಾ ಸಂಸ್ಥೆಗಳ ರಾಜಕೀಯ ಪ್ರೇರಿತ ದಾಳಿ: ವೆಲ್ಫೇರ್ ಪಾರ್ಟಿ ಖಂಡನೆ

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಮತ್ತು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ,ಹಿಂದುಳಿದ , ರೈತ ಮತ್ತು ಸರ್ಕಾರವನ್ನು ಪ್ರಶ್ನಿಸುವ ಸಂವಿಧಾನ ಪರ ಹೋರಾಡುವವರ ಮೇಲೆ ನಿರಂತರವಾಗಿ ಕಿರುಕುಳ ಹೆಚ್ಚಾಗಿದ್ದು,ಕೇಂದ್ರ ಸರ್ಕಾರ NIA, ED ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಅಲ್ಪಸಂಖ್ಯಾತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದು ಇದು ಅತ್ಯಂತ ಖಂಡನಿಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ಮದ್ರಸಗಳ ಸರ್ವೇ ಹೆಸರಲ್ಲಿ ಅಲ್ಪಸಂಖ್ಯಾತ ವಿದ್ಯಾಸಂಸ್ಥೆ ಗಳಲ್ಲಿ ಕಿರುಕುಳ ಕೊಟ್ಟು ಭಯದ ವಾತಾವರಣ ಸೃಷ್ಟಿಸಿ ಮಾಡುವ ಹುನ್ನಾರ ನಡೆದಿದೆ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳನ್ನು ದಮನ ಮಾಡುವ ನಿರಂತರ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ಸ್ವತಹ ಮುಖ್ಯಮಂತ್ರಿಗಳು ಎರಡು ಸಮುದಾಯದ ಮಧ್ಯ ತಾರತಮ್ಯ ಮಾಡಿರುವುದು ಜಗಜಾಹಿರಾಗಿದೆ,ಒಂದು ಸಮುದಾಯದ ಯುವಕನ ಕೊಲೆ ಆದಾಗ ಸ್ವತಹ ಮುಖ್ಯಮಂತ್ರಿ ಯುವಕ ಮನೆಗೆ ಭೇಟಿ ನೀಡಿದರು ಪರಿಹಾರ ಘೋಷಣೆ ಮಾಡಿ ಪ್ರಕರಣವನ್ನು NIA ಗೆ ವಹಿಸಿದ್ದು ಅದೇ ಊರಿನ ಅಲ್ಪಸಂಖ್ಯಾತ ಸಮುದಾಯದ ಯುವಕನ ಕೊಲೆಯ ಬಗ್ಗೆ ಒಂದು ಹೇಳಿಕೆಯು ನೀಡಿಲ್ಲ, ಒಂದು ನಯಪೈಸೆ ಪರಿಹಾರ ಘೋಷಿಸಿಲ್ಲ ಬದಲಿಗೆ ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಹುಟ್ಟಿಸಿದವರ ಮೇಲೆ ಇದ್ದ ಪ್ರಕರಣಗಳು ಹಿಂಪಡೆದು ಪರೋಕ್ಷವಾಗಿ ಕೋಮುವಾದಿ ಗಳಿಗೆ, ಕಿಡಿಗೇಡಿಗಳಿಗೆ ಬೆಂಬಲ ನೀಡಿದ್ದಾರೆ.ಇಂದು ನಡೆದಿರುವ ಐಟಿ ಹಾಗೂ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಅಲ್ಫಾಸಂಖ್ಯಾತ ಸಮುದಾಯದ ರಾಜಕೀಯ ದಮನದ ಹುನ್ನಾರ ಇದು ಆಗಿದೆ ಎಂದು ಅವರು ಹೇಳಿದರು.

Latest Indian news

Popular Stories

Social Media Auto Publish Powered By : XYZScripts.com
error: Content is protected !!