ತ್ರಿಪುರಾ ಚುನಾವಣೆ: ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ – ಮತದಾನ ಆರಂಭ

ತ್ರಿಪುರಾದಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿದ್ದು, ಆಡಳಿತಾರೂಢ ಬಿಜೆಪಿ ದೊಡ್ಡ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.

ಸಿಪಿಎಂ ಅನಿರೀಕ್ಷಿತವಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ತೃಣಮೂಲ ಕೂಡ ಬಲವಾಗಿ ಪ್ರಯತ್ನಿಸುತ್ತಿದೆ. ಹೊಸ ಪಕ್ಷದ ತಿಪ್ರಾ ಮೋತಾ ನಿರ್ಣಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಇಂದು ಬೆಳಿಗ್ಗೆ ಚುನಾವಣೆ ಆರಂಭವಾಗಿದ್ದು ಮುಖ್ಯಮಂತ್ರಿ ಮಾಣಿಕ್ ಸಹ ಅವರು ಅತೀ ಹೆಚ್ಚು ಮತದಾನ ಮಾಡುವಂತೆ ಮತದಾರರನ್ನು ಆಗ್ರಹಿಸಿದ್ದಾರೆ.

ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 60 ಕ್ಷೇತ್ರಗಳಲ್ಲಿ 259 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 3337 ಮತದಾನ ಕೇಂದ್ರಗಳಲ್ಲಿ ಮತದಾರರು ಮತ ಚಲಾಯಿಸಲಿದ್ದಾರೆ.

Latest Indian news

Popular Stories