ದತ್ತ ಪೀಠವನ್ನು ಹಿಂದುಗಳಿಗೆ ಬಿಟ್ಟು ಕೊಡಲು ಸರಕಾರವನ್ನು ಆಗ್ರಹಿಸಿದ ಶ್ರೀರಾಮ ಸೇನೆ!

ಚಿಕ್ಕಮಗಳೂರು: ಸರ್ಕಾರ ಮೀನಮೇಷ ಎಣಿಸದೆ, ಎಲ್ಲಾ ನಾಟಕಗಳನ್ನು ಬಿಟ್ಟು ಹೈಕೋರ್ಟ್ ನಿರ್ದೇಶನದಂತೆ ದತ್ತ ಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಶ್ರೀರಾಮ ಸೇನೆ ಆಗ್ರಹಿಸಿದೆ. ಅಷ್ಟೇ ಅಲ್ಲ, ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರು ಒತ್ತಾಯಿಸಿದರು.

ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ ಶ್ರೀ ರಾಮ ಸೇನೆ ವತಿಯಿಂದ 17ನೇ ದತ್ತ ಮಾಲಾ ಅಭಿಯಾನಕ್ಕೆ ದತ್ತ ಭಕ್ತರು ದತ್ತ ಮಾಲಾ ಧಾರಣೆ ಮಾಡುವ ಮೂಲಕ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. ಸರ್ಕಾರ ಸಮಿತಿ ರಚನೆ, ಅಹವಾಲುಗಳನ್ನು ಸ್ವೀಕರಿಸುವುದನ್ನು ಬಿಟ್ಟು ನ್ಯಾಯಾಲಯದ ಆದೇಶದಂತೆ ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಹಿಂದೂಗಳಿಗೆ ದತ್ತ ಪೀಠವನ್ನು ಒಪ್ಪಿಸುತ್ತೇವೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷವಾದ್ರು ಮೀನ ಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ ನಾಚಿಕೆ ಆಗಬೇಕು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದತ್ತ ಮಾಲಾ ಸಂದರ್ಭದಲ್ಲಿ ದತ್ತ ಮಾಲಾ ಧಾರಣೆ ಮಾಡದಿದ್ದರೆ ನೀವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕಳೆದ ಬಾರಿ ನೀಡಲಾಗಿತ್ತು. ಅದೇ ರೀತಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ದತ್ತಾತ್ರೇಯರ ಜೊತೆಗೆ, ಗುರುಗಳ ಜೊತೆಗೆ ಹಾಗೂ ಧರ್ಮದ ಜೊತೆಗೆ ಆಟವಾಡಿದರೆ ಧರ್ಮ ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ. ಹಾಗಾಗಿ ತಡ ಮಾಡದೇ ಹಿಂದೂಗಳಿಗೆ ದತ್ತ ಪೀಠವನ್ನು ಒಪ್ಪಿಸಬೇಕು ಎಂದು ಆಗ್ರಹಿಸಿದರು.

Latest Indian news

Popular Stories

error: Content is protected !!