ದುಡಿಯಲು ಸಮರ್ಥನಾಗಿರುವ ಪತಿ, ಪತ್ನಿಯಿಂದ ಜೀವನಾಂಶ ಕೇಳುವ ಹಾಗಿಲ್ಲ: ಕರ್ನಾಟಕ ಹೈಕೋರ್ಟ್ ಛೀಮಾರಿ!

ಬೆಂಗಳೂರು: ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರುವ ಪತಿಯು, ಪತ್ನಿಯಿಂದ ಜೀವನಾಂಶ ಕೇಳುವ ಹಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಮ್ ನಾಗಪ್ರಸನ್ನ ಸ್ಪಷ್ಟಪಡಿಸಿದ್ದಾರೆ‌.

ಪತಿಗೆ ಯಾವುದೇ ಅಂಗವೈಕಲ್ಯ ಇಲ್ಲದೆಯೂ, ಮಾನಸಿಕ ಸಮಸ್ಯೆ ಇಲ್ಲದಿದ್ದರೂ, ಪತ್ನಿ ಜೀವನಾಂಶ ನೀಡಬೇಕು ಎಂದು ಆದೇಶಿಸಿದರೆ ಪತಿಯ ಆಲಸ್ಯತನವನ್ನು ಉತ್ತೇಜಿಸುವ ಹಾಗಾಗುತ್ತದೆ ಎಂದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಿಂದೂ ಮ್ಯಾರೇಜ್ ಆಕ್ಟ್ ಸೆಕ್ಷನ್ 24 ರ ಪ್ರಕಾರ, ಜೀವನಾಂಶಕ್ಕೆ ಇಬ್ಬರೂ ಅರ್ಹರು. ಆದರೆ ಪತಿಗೆ ದುಡಿಯಲು ಅಡಚಣೆ ಅಥವಾ ಅಂಕವಿಕಲತೆ ಇಲ್ಲದೇ ಹೋದರೆ ಜೀವನಾಂಶ ಪಡೆಯುವುದು ಆಲಸ್ಯಕ್ಕೆ ಕಾರಣವಾಗುತ್ತದೆ.        

ಕುಟುಂಬ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದ ಸಂದರ್ಭ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಫ್ಯಾಮಿಲಿ ಕೋರ್ಟ್, ಪತ್ನಿಗೆ ತಿಂಗಳಿಗೆ ಹತ್ತು ಸಾವಿರ ಜೀವನಾಂಶ ಹಾಗೂ ದಾವೆಯ ಖರ್ಚು 25 ಸಾವಿರ ರುಪಾಯಿಯನ್ನು ನೀಡಬೇಕು, ಹಾಗೂ ಪತಿಯು ತಿಂಗಳಿಗೆ 2 ಲಕ್ಷ ರೂಪಾಯಿ ಜೀವನಾಂಶ ಹಾಗೂ 30 ಸಾವಿರ ದಾವೆಯ ಖರ್ಚನ್ನು ಪತ್ನಿಯಿಂದ ಕೇಳಿದ್ದ ಅರ್ಜಿಯನ್ನು ಇದೇ ವೇಳೆ ತಿರಸ್ಕರಿಸಿ ಆದೇಶ ನೀಡಿದೆ.

ಉದ್ಯೋಗ ಹಾಗೂ ಆದಾಯವಿಲ್ಲದ ಕಾರಣ ಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಆದ್ದರಿಂದ, ಪತ್ನಿಯೇ ಜೀವನಾಂಶ ನೀಡಬೇಕು ಎಂಬ ಪತಿಯ ವಾದ ದೋಷಪೂರಿತವಾಗಿದೆ. ಈ ಪ್ರಕರಣವನ್ನು ಗಮನಿಸಿದರೆ ಪತಿ ತನ್ನ ಪತ್ನಿಯಿಂದ ಜೀವನಾಂಶ ಪಡೆದು ಆರಾಮಾಗಿ ಜೀವನ ನಡೆಸಲು ನಿರ್ಧರಿಸಿ ದಂತಿದೆ. ತನ್ನ ಹಾಗೂ ಪತ್ನಿ ಸೇರಿದಂತೆ ಮಗುವಿನ ಜೀವನ ನಿರ್ವಹಣೆಗೆ ಪತಿ ದುಡಿಯಬೇಕು. ಇದು ಆತನ ಆದ್ಯ ಕರ್ತವ್ಯ‘ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ ಪತ್ನಿಯ ಮನೆಕಡೆ, ಹೆತ್ತವರು ಉತ್ತಮ ಹಣಕಾಸಿನ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಪತ್ನಿಯು ತನ್ನ ಹಾಗೂ ಮನೆಯವರ ವಿರುದ್ಧ ಹಲವು ಮೊಕದ್ದಮೆಗಳನ್ನು ಹೂಡಿದ್ದಾರೆ. ಇದಕ್ಕೂ ಸಾಕಷ್ಟು ಖರ್ಚಾಗಿದೆ ಹೀಗಾಗಿ ಜೀವನಾಂಶ ಹಾಗೂ ಮೊಕದ್ದಮೆಯ ಖರ್ಚು ಭರಿಸಬೇಕೆಂದು ಕೇಳಿಕೊಂಡಿದ್ದಾನೆ.

ಅರ್ಜಿದಾರ ಕೆಲಸ ಕಳೆದುಕೊಂಡಿದ್ದು, ಸ್ವತಃ ತನ್ನ ಖರ್ಚುವೆಚ್ಚ ಭರಿಸಲು ಸಾಧ್ಯವಾಗದೇ ಇರುವಾಗ, ಪತ್ನಿಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಬದಲಾಗಿ ತನಗೇ ಪತ್ನಿ ಜೀವನಾಂಶ ಕೊಡಬೇಕೆಂಬ ಅರ್ಜಿ ಒಪ್ಪಲು ಸಾಧ್ಯವಿಲ್ಲ ಹಾಗೂ ಮೂಲಭೂತವಾಗಿ ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪತಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 50,000 ರೂ.ಗಳನ್ನು ಬಾಡಿಗೆಗೆ ನೀಡಿದ ಆಸ್ತಿಯಿಂದ ತಿಂಗಳಿಗೆ 75,000 ರೂಪಾಯಿ ಪಡೆಯುತ್ತಿದ್ದಾರೆ ಎಂದು ಪತ್ನಿಯ ಅಫಿಡವಿಟ್ ಅನ್ನು ಕೋರ್ಟ್ ಗಮನಿಸಿದೆ.ಕೋವಿಡ್ ಪ್ರಾರಂಭವಾದ ನಂತರ ಪತಿ ತನ್ನ ಕೆಲಸವನ್ನು ಕಳೆದುಕೊಂಡ ಮಾತ್ರಕ್ಕೆ, ಅವನು ಸಂಪಾದಿಸಲು ಅಸಮರ್ಥನೆಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. “ಪತಿ ತನ್ನ ನಡವಳಿಕೆಯಿಂದ ಹೆಂಡತಿಯ ಕೈಯಿಂದ ಜೀವನಾಂಶವನ್ನು ಪಡೆಯುವ ಮೂಲಕ ವಿರಾಮ ಜೀವನ ನಡೆಸಲು ನಿರ್ಧರಿಸಿದ್ದಾರೆ ಎಂದು ನಿರ್ವಿವಾದವಾಗಿ ತೀರ್ಮಾನಿಸಬಹುದು” ಎಂದು ನ್ಯಾಯಾಲಯ ಹೇಳಿದೆ.

Latest Indian news

Popular Stories