ದೆಹಲಿಯಲ್ಲಿ ಗಾಳಿ ಸಹಿತ ಭಾರೀ ಮಳೆ

ನವ ದೆಹಲಿ: ಇಂದು ಬೆಳಿಗ್ಗೆ ದೆಹಲಿಯಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ.

ದೆಹಲಿಯು ತೀವ್ರ ತಾಪಮಾನದಿಂದ ಸ್ವಲ್ಪ ಚೇತರಿಸಿಕೊಂಡಿದ್ದು, ಮಳೆಯಿಂದಾಗಿ ವಿಮಾನಯಾನದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಮರಗಳು ಧರೆಗುರುಳಿವೆ.

ರಾಷ್ಟ್ರ ರಾಜಧಾನಿ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಇಂದು ಬೆಳಿಗ್ಗೆ ಗುಡುಗು ಸಹಿತ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಮಂಗಳವಾರದವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

Latest Indian news

Popular Stories