ದೆಹಲಿಯಲ್ಲಿ ಬಿರು ಬಿಸಿಲು – ತಂಪೆರದ ತುಂತುರು ಮಳೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿರು ಬಿಸಿಲು ತೀವ್ರವಾಗಿದೆ. ಶುಕ್ರವಾರ ಗರಿಷ್ಠ 44 ಡಿಗ್ರಿಗೆ ಏರಿದ್ದ ಬಿಸಿಲು ಶನಿವಾರ 41. ಡಿಗ್ರಿಯಷ್ಟು ಕಂಡು ಬಂತು.

ತೀವ್ರ ಉಷ್ಣಾಂಶದೊಂದಿಗೆ ಬಿಸಿ ಗಾಳಿ ಜನ ಜೀವನವನ್ನು ತತ್ತರಿಸಿದೆ. ಇದರ‌ ನಡುವೆ ರಾತ್ರಿ ಸುರಿದ ತುಂತುರು‌ ಮಳೆ ವಾತವರಣದಲ್ಲಿದ್ದ ಭಾರೀ ಧೂಳು, ಹೊಗೆಯಿಂದ ತಪ್ಪಿಸಿದೆ.

ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಲು ಹರ ಸಾಹಸ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಹವಾ ನಿಯಂತ್ರಿತ ವ್ಯವಸ್ಥೆಯಿರುವ ವಾಹನಗಳಲ್ಲಿ ಜನ ಓಡಾಟ ನಡೆಸುತ್ತಿದ್ದಾರೆ. ಮುಖ್ಯವಾಗಿ ಮೆಟ್ರೊ ಓಡಾಟ ಹೆಚ್ಚಾಗಿ ಕಂಡು ಬಂದಿದೆ.

ಹವಾಮಾನ ಇಲಾಖೆ ವರದಿಯ ಪ್ರಕಾರ ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ಉಷ್ಣಾಂಶದ ತೀವ್ರತೆ ಕಡಿಮೆಯಾಗಲಿದೆ.

Latest Indian news

Popular Stories