ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಎರಡನೇ ಸುತ್ತಿನ ವಿಚಾರಣೆಯನ್ನು ಸಿಬಿಐ ಭಾನುವಾರ ಆರಂಭಿಸಿದೆ.
ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗುವುದಕ್ಕೂ ಮುನ್ನ ಮನೀಶ್ ಸಿಸೋಡಿಯಾ ಅವರು, ರಾಜ್ ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ನಂತರ ಭಾರೀ ಭದ್ರತೆಯೊಂದಿಗೆ ಸಿಸೋಡಿಯಾ ಅವರು ಸಿಬಿಐ ಕಚೇರಿಗೆ ಆಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಭಾನುವಾರವೇ ಸಿಬಿಐ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದಿತ್ತು. ಆದರೆ, ಬಜೆಟ್ ಪ್ರಕ್ರಿಯೆ ಕಾರಣ ನೀಡಿ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದರು. ಅಂತೆಯೇ ಫೆ.26ರಂದು ವಿಚಾರಣೆ ದಿನಾಂಕ ನಿಗದಿ ಮಾಡಲಾಗಿತ್ತು.
ಈ ನಡುವೆ ಸಿಬಿಐ ತಮ್ಮನ್ನು ಬಂಧಿಸುತ್ತದೆ ಎಂಬ ಆತಂಕವನ್ನು ಮನೀಶ್ ಸಿಸೋಡಿಯಾ ಅವರು ಆತಂಕ ಹೊರಹಾಕಿದ್ದಾರೆ.