ದೆಹಲಿ ಗಡಿಯಿಂದ ರೈತರನ್ನು ಬಲವಾಗಿ ಎಬ್ಬಿಸಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗಬಹುದು – ಸರಕಾರವನ್ನು ಎಚ್ಚರಿಸಿದ ರಾಕೇಶ್ ಟಿಕಾಯತ್

ನವದೆಹಲಿ: ದೆಹಲಿ ಗಡಿಯಿಂದ ರೈತರನ್ನು ಬಲವಾಗಿ ಎಬ್ಬಿಸಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗಬಹುದು ಎಂದು ಕೇಂದ್ರ ಸರಕಾರವನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.

ಒಂದು ವೇಳೆ ಸರ್ಕಾರ ನಮ್ಮನ್ನು ಬಲವಂತವಾಗಿ ಎಬ್ಬಿಸಿದರೆ ಎಲ್ಲ ಸರಕಾರಿ ಕಚೇರಿಯನ್ನು ‘ಗಲ್ಲ ಮಂಡಿ’ ಅಥವಾ ಕೃಷಿ ಮಾರುಕಟ್ಟೆಯಾಗಿ ಬದಲಾಯಿಸಬೇಕಾಗಬಹುದೆಂದು ರಾಕೇಶ್ ಟಿಕಾಯತ್ ಎಚ್ಚರಿಸಿದರು.

ಟಿಕ್ರಿ ಮತ್ತು ಗಾಝಿಪುರ ಗಡಿಯಲ್ಲಿ ರಸ್ತೆ ತಡೆಯನ್ನು ತೆಗೆದ ನಂತರ ರೈತ ಮುಖಂಡ ರಾಕೇಶ್ ಟಿಕಾಯತ್’ರಿಂದ ಈ ಹೇಳಿಕೆ ಬಂದಿದೆ. ಸಾವಿರಾರು ರೈತರು ಕೇಂದ್ರ ಕೃಷಿ ಕಾಯಿದೆ ವಿರೋಧಿಸಿ ಕಳೆದ ಹತ್ತು ತಿಂಗಳಿನಿಂದ ಪ್ರಬಲವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

Latest Indian news

Popular Stories

error: Content is protected !!