ದೆಹಲಿ ಸೇರಿ ಉತ್ತರ ಭಾರತದಲ್ಲಿ ದಟ್ಟ ಮಂಜು, ಕತ್ತಲೆ ವಾತಾವರಣ: ರೈಲು, ವಿಮಾನ ಸೇವೆಗಳಲ್ಲಿ ವ್ಯತ್ಯಯ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಂಗಳವಾರ ನಸುಕಿನ ಜಾವದಿಂದಲೇ ವ್ಯಾಪಕ ಶೀತಗಾಳಿ, ಚಳಿಯಿದೆ. ದೆಹಲಿಯ ಸಫ್ದರ್ಜಂಗ್ ನಲ್ಲಿ ಅತ್ಯಂತ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಇಂದು ಮುಂಜಾನೆ ದಾಖಲಾಗಿದೆ. ಪಲಮ್ ನಲ್ಲಿ ಇಂದು ಬೆಳಗ್ಗೆ 8.30ಕ್ಕೆ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

40 ವಿಮಾನಗಳ ಹಾರಾಟ ವಿಳಂಬ: ದಟ್ಟ ಮಂಜು, ಪ್ರತಿಕೂಲ ಹವಾಮಾನದಿಂದಾಗಿ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ 40 ವಿಮಾನಗಳ ಹಾರಾಟ ವಿಳಂಬವಾಗಿದೆ. ಸುಮಾರು 50 ಸ್ವದೇಶಿ ವಿಮಾನಗಳ ನಿರ್ಗಮನ ದೆಹಲಿ ವಿಮಾನ ನಿಲ್ದಾಣದಿಂದ ತಡವಾಗಿದೆ. ಅದೇ ರೀತಿ 18 ಸ್ವದೇಶಿ ವಿಮಾನಗಳ ಆಗಮನ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಳಂಬವಾಗಿದೆ, ಬೆಳಗ್ಗೆ 7 ಗಂಟೆಯವರೆಗೆ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಕೂಡ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರೈಲು ಸಂಚಾರದಲ್ಲಿ ವ್ಯತ್ಯಯ: ಉತ್ತರ ಭಾರತದಲ್ಲಿ ಇಂದು ಹಲವು ರೈಲುಗಳ ಸಂಚಾರ ದಟ್ಟ ಮಂಜು, ಹವಾಮಾನದಲ್ಲಿ ಮುಸುಕು ಕವಿದಿದ್ದರಿಂದ ವ್ಯತ್ಯಯವಾಗಿದೆ. ರೈಲುಗಳ ಸಂಚಾರ ತಡವಾಗಿ ಆರಂಭವಾಗುತ್ತಿದೆ. 

Latest Indian news

Popular Stories