ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸಬೇಕು – ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಗೋಪೂಜೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಬಲಿಪಾಡ್ಯಮಿ ದಿನ ಹಿಂದೂಗಳು ತಮ್ಮ ತಮ್ಮ ಮನೆಗಳಲ್ಲಿರುವ ಗೋವುಗಳಿಗೆ ಪೂಜೆ ಮಾಡಿ ತಿನ್ನಲು ನೀಡುತ್ತಿದ್ದರು. ಆದರೆ ಈ ವರ್ಷ ನವೆಂಬರ್ 5ರಂದು ಬಲಿಪಾಡ್ಯಮಿ ದಿನ ಕಡ್ಡಾಯವಾಗಿ ದೇವಸ್ಥಾನಗಳಲ್ಲಿ ಕೂಡ ಪೂಜೆ ಮಾಡಬೇಕೆಂದು ಮುಜರಾಯಿ ಇಲಾಖೆ ಆದೇಶದಲ್ಲಿ ಹೇಳಲಾಗಿದೆ.

ಬಲಿಪಾಡ್ಯಮಿ ದಿನ ಗೋಧೂಳಿ ಲಗ್ನದಲ್ಲಿ ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ದೇವಸ್ಥಾನಗಳಲ್ಲಿ ಗೋವುಗಳಿಗೆ ಪೂಜೆ ಮಾಡಬೇಕು. ಈ ಮೂಲಕ ಹಿಂದೂ ಸನಾತನ ಧರ್ಮವನ್ನು ಎತ್ತಿ ಹಿಡಿಯಬೇಕು. ಗೋವುಗಳಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರೆ ಶ್ರೇಯಸ್ಸು ಆಗುತ್ತದೆ ಎಂಬ ನಂಬಿಕೆಯೊಂದಿಗೆ ಪೂಜೆ ಮಾಡಬೇಕೆಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

Latest Indian news

Popular Stories

error: Content is protected !!