ಮಂಗಳೂರು, ಜನವರಿ 20: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರು ದೇವಸ್ಥಾನದ ಬಳಿ ವ್ಯಾಪಾರ ಚಟುವಟಿಕೆ ನಡೆಸದಂತೆ ನಿಷೇಧ ಹೇರಿದ್ದ ಎಲ್ಲಾ ಬ್ಯಾನರ್‌ಗಳನ್ನು ನಗರ ಪೊಲೀಸರು ಜನವರಿ 19 ರಂದು ಗುರುವಾರ ತೆಗೆದಿದ್ದಾರೆ. ವಿಶ್ವ ಹಿಂದೂ ಪರಿಷತ್- ಬಜರಂಗದಳ ಈ ಬ್ಯಾನರ್‌ಗಳನ್ನು ಹಾಕಿತ್ತು.
ಜಾತ್ರೆ ಜನವರಿ 15 ರಂದು ಪ್ರಾರಂಭವಾಗಿ ಜನವರಿ 21 ರಂದು ಕೊನೆಗೊಳ್ಳಲಿದೆ. ಗುರುವಾರ ವಿಎಚ್‌ಪಿ-ಬಜರಂಗ ದಳದವರು ಹಾಕಿರುವ ಬ್ಯಾನರ್‌ಗಳಲ್ಲಿ ಕುಕ್ಕರ್ ಸ್ಫೋಟದ ಬಗ್ಗೆ ಉಲ್ಲೇಖಿಸಲಾಗಿದೆ ಮತ್ತು ಆರೋಪಿಗಳ ಪ್ರಾಥಮಿಕ ಗುರಿ ಕದ್ರಿ ಮಂಜುನಾಥ ದೇವಸ್ಥಾನ ಎಂದು ಆರೋಪಿಸಲಾಗಿದೆ. ಅಂತಹ ಮನಸ್ಥಿತಿಯುಳ್ಳವರು ಮತ್ತು ಮೂರ್ತಿ ಪೂಜೆಯನ್ನು ವಿರೋಧಿಸುವವರು ಪೂಜಾ ಸ್ಥಳದ ಬಳಿ ಜಾತ್ರೆಯ ಸಮಯ ವ್ಯಾಪಾರದಲ್ಲಿ ತೊಡಗುವಂತಿಲ್ಲ ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದ ಆಚರಣೆಗಳನ್ನು ನಂಬುವಂತಹ ವ್ಯಾಪಾರಿಗಳಿಗೆ ಮಾತ್ರ ತಮ್ಮ ವ್ಯಾಪಾರ ಮತ್ತು ವ್ಯವಹಾರವನ್ನು ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ಬ್ಯಾನರ್ ಹೇಳಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಜಾತ್ರೆಯ ಆಸುಪಾಸಿನಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಒಪ್ಪಿಗೆ ನೀಡಿಲ್ಲ.ಬಶಾಂತಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪೊಲೀಸರು ಬ್ಯಾನರ್‌ಗಳನ್ನು ತೆಗೆದಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.